ಎಲಿಮಲೆಯಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟನೆ

0

ಸಾಮಾಜಿಕ ಸೇವೆಗೆ ನೆಲ್ಲೂರು ಕೆಮ್ರಾಜೆ ಸಹಕಾರ ಸಂಘ ಸದಾ ಸಿದ್ಧ : ವಿಷ್ಣು ಭಟ್ ಮೂಲೆತೋಟ

ಪ್ರತಿಷ್ಠಾನದ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಜನರಿಗೆ ದೊರಕುವಂತೆ ಮಾಡುವುದು ನಮ್ಮ ಧ್ಯೇಯ : ಜ್ಯೋತಿರಾಜ್

ಸುದ್ದಿಯ ಮೂಲಕ ಸುಳ್ಯ ತಾಲೂಕು ಡಿಜಿಟಲೀಕರಣಗೊಳಿಸಲು ಸಿದ್ಧತೆ : ಹರೀಶ್ ಬಂಟ್ವಾಳ್

ದಂತ ತಪಾಸಣೆ ಮತ್ತು ಚಿಕಿತ್ಸೆ ಯಂತಹ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ನಡೆದಾಗ ಅದು ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ನಮ್ಮ ಸಹಕಾರಿ ಸಂಘದ ಮೂಲಕ ಅನೇಕ ಸಮಾಜಮುಖಿ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ನಮ್ಮ ಸಹಕಾರಿ ಸಂಘದ ಸದಸ್ಯರಿಗೆ ಅನುಕೂಲವಾಗುವ ಕಾರ್ಯಕ್ರಮ ಕ್ಕೆ ನಮ್ಮ ಸಹಕಾರಿ ಸಂಸ್ಥೆ ಸದಾ ಸಿದ್ದವಾಗಿದೆ. ಈಗಾಗಲೇ ಆನ್ ಲೈನ್ ವಂಚನೆ ತಪ್ಪಿಸಲು ಕೇಂದ್ರ ಸರಕಾರ ಜಾರಿಗೆ ತಂದಿರುವ ಆಪ್ ನಲ್ಲಿ ನಮ್ಮ ಸಹಕಾರಿ ಸಂಘದ ಮೂಲಕ ದೇಶದ ವಿವಿಧ ಮೂಲಗಳಿಂದ ಕೃಷಿಕನಿಗೆ ಬೇಕಾಗುವ ವಸ್ತುಗಳನ್ನು ತರಿಸುವ ಬಗ್ಗೆಯೂ ತಯಾರಿ ನಡೆದಿದೆ ಎಂದು ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಹೇಳಿದರು. ಅವರು ಎಲಿಮಲೆಯಲ್ಲಿ ನಡೆದ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ವಿಜಯ ಗ್ರಾಮಾಭಿವೃದ್ಧಿ ಸಮಿತಿ ನೆಲ್ಲೂರು ಕೆಮ್ರಾಜೆ ಮತ್ತು ಮರ್ಕಂಜ ಇದರ ವತಿಯಿಂದ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸುದ್ದಿ ಸುಳ್ಯ ಹಬ್ಬ ಗ್ರಾಮ ಸಮಿತಿ ನೆಲ್ಲೂರು ಕೆಮ್ರಾಜೆ, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ನೆಲ್ಲೂರು ಕೆಮ್ರಾಜೆ
ಮತ್ತು ಕೆ. ವಿ. ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ
ಜಂಟಿ ಆಶ್ರಯದಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಸೆ.4ರಂದು ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.

ವಿಜಯ ಗ್ರಾಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರತಿಷ್ಠಾನದ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಜನರಿಗೆ ದೊರಕುವಂತೆ ಮಾಡುವುದು ನಮ್ಮ ಧ್ಯೇಯ. ಜನರು ಇಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಸುದ್ದಿ ಬಿಡುಗಡೆ ವಾರ ಪತ್ರಿಕೆಯ ಪ್ರಧಾನ ಸಂಪಾದಕ ಹರೀಶ್ ಬಂಟ್ವಾಳ್ ರವರು ಮುಖ್ಯ ಅತಿಥಿಗಳ ನೆಲೆಯಲ್ಲಿ ಮಾತನಾಡಿ ಬ್ಯಾಂಕ್ ಗಳು, ಸಹಕಾರಿ ಸಂಘಗಳು ಜನೋಪಯೋಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈಗಾಗಲೇ ಸುದ್ದಿ ಸಮೂಹ ಸಂಸ್ಥೆಗಳ ವತಿಯಿಂದ ಸುದ್ಧಿ ಸ್ಟೋರ್ ಎಂಬ ಅಪ್ ಮಾಡಿ ಆ ಮೂಲಕ ಮಾರಾಟ ಮತ್ತು ಖರೀದಿ ಮಾಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಆ ಮೂಲಕ ಗ್ರಾಮೀಣ ಭಾಗದಲ್ಲಿರುವ ಅಂಗಡಿಗಳಿಂದಲೇ ಆನ್ ಲೈನ್ ಮೂಲಕ ಖರೀದಿ ಮಾಡಬಹುದು ಎಂದು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕೋಟೆಮಲೆ, ಚಾಮುಂಡೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಜಯಂತ, ದೊಡ್ಡತೋಟ ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕ ಅನಂತ ಶಿವಪ್ರಸಾದ್, ಕೆ ವಿ ಜಿ ದಂತ ಮಹಾವಿದ್ಯಾಲಯದ ಸಾರ್ವಜನಿಕ ದಂತ ಅರೋಗ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ರಾದ ಡಾ. ಸುಮನ್ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸವಿತಾ ಚಾಕೋಟೆ ಪ್ರಾರ್ಥಿಸಿದರು.
ನೆಲ್ಲೂರು ಕೆಮ್ರಾಜೆ ಮತ್ತು ಮರ್ಕಂಜ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ದಯಾನಂದ ಕೊರತ್ತೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ವೇಣುಗೋಪಾಲ ತುಂಬೆತಡ್ಕ ವಂದಿಸಿದರು. ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.

ಸಭೆಯಲ್ಲಿ ನಿವೃತ್ತ ಪ್ರಾಂಶುಪಾಲ ಹಾಗೂ ಸುಳ್ಯ ಹಬ್ಬ ಗ್ರಾಮ ಸಮಿತಿ ದೇವಚಳ್ಳದ ಅಧ್ಯಕ್ಷರಾದ ಬಾಬು ಮಾಸ್ಟರ್ ಅಚ್ರಪ್ಪಾಡಿ, ಸುಳ್ಯ ಹಬ್ಬ ಸಮಿತಿ ನೆಲ್ಲೂರು ಕೆಮ್ರಾಜೆ ಇದರ ಕಾರ್ಯಧ್ಯಕ್ಷ ರಾಜರಾಮ್ ಭಟ್ ಬೆಟ್ಟ, ಜಾಲ್ಸುರು ವಿಜಯ ಗ್ರಾಮಾಭಿವೃದ್ದಿ ಸಮಿತಿ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ನಿವೃತ್ತ ಶಿಕ್ಷಕಿ ಶ್ಯಾಮಲಾ ಎ. ವಿ., ನೆಲ್ಲೂರು ಕೆಮ್ರಾಜೆ ಪ್ರಾ. ಕೃ. ಪ. ಸ. ಸಂಘದ ನಿರ್ದೇಶಕ ದೇವಿಪ್ರಸಾದ್ ಸುಳ್ಳಿ, ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯ ಗೋವಿಂದ ಅಳವುಪಾರೆ, ಸುಬ್ರಮಣ್ಯ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವರಾಮ ಕಜೆಮೂಲೆ ಮತ್ತಿತರರು ಉಪಸ್ಥಿತರಿದ್ದರು.