ಮಿಲಾದುನ್ನ ಬಿ ಕಾರ್ಯಕ್ರಮದ ಹಿನ್ನಲೆ ಯಲ್ಲಿ ಸೆ.5 ರಂದು ಅಂಬಟಡ್ಕ ಇಕ್ರ್ ಅರಬಿ ಉರ್ದು ಮದರಸದಲ್ಲಿ ಅಲ್ ಹುದಾ ಜಾಮಿಯಾ ಮಸೀದಿ ವತಿಯಿಂದ ಮೀಲಾದ್ ಸಂಭ್ರಮ ನಡೆಯಿತು.
ಸ್ಥಳೀಯ ಮಸೀದಿ ಕಮಿಟಿ ಅಧ್ಯಕ್ಷ ಹಾಜಿ ಇಸ್ಮಾಹಿಲ್ ಸಾಹೇಬ್ ರವರು ಧ್ವಜಾರೋಹಣವನ್ನು ನೇರವೇರಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ಕಾರ್ಯದರ್ಶಿ ಜಲೀಲ್ ರವರು ಸ್ವಾಗತಿಸಿ ವಂದಿಸಿದರು.
ಜುಮಾ ನಮಾಜ್ ನಂತರ ಮೌಲಿದ್ ಪಾರಾಯಣ ಹೊಸಮದ್ದಿನ್ ಹಜ್‌ರತ್ ಉಪ್ಪಳ ರವರ ನೇತೃತ್ವದಲ್ಲಿ ನಡೆಯಿತು.








ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ಆರಂಭಗೊಂಡು ಇದರ ಉದ್ಘಾಟನೆಯನ್ನು ಮೊಗರ್ಪಣೆ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ಖಾದರ್ ಸಖಾಫಿ ಅಲ್ ಕಾಮಿಲಿ ಮುದುಗುಡ ರವರು ನಿರ್ವಹಿಸಿದರು.
ಬಳಿಕ ಮದ್ರಸಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಇಮಾಮ್ ನಯಿಮ್ ಮುಸ್ತಕ್ ಹಜ್‌ರತ್ ಕೂರ್ನಡ್ಕ ಪುತ್ತೂರು ಇವರ ಮುಖಾಂತರ ನಡೆಯಿತು.
ಸಂಜೆ 7 ಗಂಟೆಗೆ ಅಫಿಸ್ ಇಮಾಮ್ ಮೊಹಮ್ಮದ್ ರಿಜ್ವಾನ್ ಕೇಪು, ಕಡಬ ಇವರಿಂದ ಪ್ರಭಾಷಣ ಮತ್ತು ಮೀಲಾದ್ ಸಂದೇಶ ನಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ತಬರುಖ್ ವಿತರಣೆ ನಡೆದು ಮೀಲಾದ್ ಜಲ್ಸಾ ಸಮಾರೋಪ ಗೊಂಡಿತು.










