ಕೊಡಿಯಾಲ : ಶ್ರೀ ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೊಡಿಯಾಲ ಶಾರದೋತ್ಸವ ಸಮಿತಿ ವತಿಯಿಂದ ಅ.01 ರಂದು ನಡೆಯುವ 25 ನೇ ವರ್ಷದ ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಸೆ.07 ರಂದು ಕಲ್ಲಗದ್ದೆ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ಅರ್ಚಕರು ಪೂಜಾ ಕಾರ್ಯ ನೆರವೇರಿಸಿದರು.
ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಶೇಷಪ್ಪ ಆಚಾರಿ,ಅಧ್ಯಕ್ಷ ಅಶೋಕ್ ಆರ್ವಾರ,ಕಾರ್ಯದರ್ಶಿ ಶೀತಲ್ ರೈ ಕುರಿಯಾಜೆ,ಉಪಾಧ್ಯಕ್ಷ ಕುಕ್ಕಪ್ಪ ಗೌಡ ಕುಂಟಿನಿ,ಖಜಾಂಚಿ ಅರವಿಂದ ಕುಂಟಿನಿ,ಜೊತೆ ಕಾರ್ಯದರ್ಶಿ ಪ್ರಕಾಶ್ ರೈ ಕಲ್ಲಗದ್ದೆ,ಕೊಡಿಯಾಲ ಗ್ರಾ.ಪಂ.ಮಾಜಿ ಅಧ್ಯಕ್ಷ ಮೋಹನ್ ಸಾಲಿಯಾನ್ ಸಾರಕರೆ,ಶಾರದೋತ್ಸವ ಸಮಿತಿ ಮಾಜಿ ಅಧ್ಯಕ್ಷರುಗಳಾದ ಕರುಣಾಕರ ರೈ ಮರಿಕೇಯಿ,ಮೋನಪ್ಪ ನಾಯ್ಕ,ವಿಜಯೇಂದ್ರ ಪೈ,ಸಲಹಾ ಸಮಿತಿ ಸದಸ್ಯ ಶೀನಪ್ಪ ನಾಯ್ಕ,ಹರೀಶ್ ಕಲ್ಪಣೆ,ಸೀತಾರಾಮ ಕುಂಟಿನಿ ಮತ್ತಿತರರು ಉಪಸ್ಥಿತರಿದ್ದರು.