ಸುಬ್ರಹ್ಮಣ್ಯ: ಕಸ ಬಿಸಾಡಿದವರಿಗೆ ದಂಡ

0

ಪೊಲೀಸ್ ಇಲಾಖೆ ಸಾಥ್

ಸುಬ್ರಹ್ಮಣ್ಯದ ಕುಮಾರಧಾರ ನದಿಯ ಸೇತುವೆಯಿಂದ ವ್ಯಕ್ತಿಯೋರ್ವರು ಸೆ.8 ರಂದು ಕಸ ಬಿಸಾಡಿದ್ದು ಅವರನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಘಟನೆ ವರದಿಯಾಗಿದೆ.

ಕುಮಾರಧಾರ ನದಿಯ ಸೇತುವೆ ಮೇಲೆಯಿಂದ ವೇದವ್ಯಾಸ ತಂತ್ರಿ ಕಾರ್ಕಳ ಎಂಬವರು ಕಸ ಬೀಸಾಡಿದ್ದಾರೆ. ಕಸ ಬಿಸಾಡಿರುವ ದೃಶ್ಯವನ್ನು ಸ್ಥಳೀಯರೋರ್ವರು ಮೊಬೈಲ್ ನಲ್ಲಿ ಸೆರೆ ಹಿಡಿದು ಸುಬ್ರಹ್ಮಣ್ಯ ಗ್ರಾ.ಪಂ ಗೆ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಸುಬ್ರಹ್ಮಣ್ಯ ಪಂಚಾಯತ್ ನವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವಾಹನದ ಮಾಹಿತಿ ನೀಡಿದ್ದು ವಾಹನ ಮಾಲಕರನ್ನು ಪತ್ತೆ ಹಚ್ಚಿದ್ದಾರೆ. ಈ ಮಾಹಿತಿ ಆಧರಿಸಿ ಸುಬ್ರಹ್ಮಣ್ಯ ಗ್ರಾ.ಪಂ ಕಾರ್ಕಳದ ವೇದವ್ಯಾಸ ತಂತ್ರಿ ಎಂಬವರಿಗೆ ರೂ.2000 ದಂಡ ವಿಧಿಸಿರುವುದಾಗಿ ತಿಳಿದು ಬಂದಿದೆ.