ಮಂಡೆಕೋಲು ಗ್ರಾಮದ ಪೇರಾಲು ಬಾಳೆಕೋಡಿ ಹೊನ್ನಪ್ಪ ಗೌಡ (75) ಎಂಬವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.5ರಂದು ನಡೆದಿದೆ.








ಬೆಳಗ್ಗೆ ತೋಟಕ್ಕೆಂದು ಹೋದವರು ತೋಟದಲ್ಲಿರುವ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡಿದ್ದರು. ತಡವಾದರೂ ಬಾರದಿದ್ದಾಗ ಮನೆಯವರು ತೋಟಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಬಂದು ಮಹಜರು ನಡೆಸಿದರು.
ಮೃತರು ಪುತ್ರಿಯರಾದ ಶಶಿಕಲಾ, ಗೀತಾ, ಪುತ್ರರಾದ ಸೀತಾರಾಮ, ಸುಧೀರ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.









