ಸುಬ್ರಹ್ಮಣ್ಯದ ಎಸ್.ಎಸ್. ಪಿ. ಯು ಕಾಲೇಜಿನ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ಸುಬ್ರಹ್ಮಣ್ಯದ ಎಸ್.ಎಸ್. ಪಿ.ಯು ಕಾಲೇಜಿನ ಪ್ರೌಢಶಾಲಾ ವತಿಯಿಂದ ಸೆ. 9 ರಂದು ಶಿಕ್ಷಕರ ದಿನಾಚರಣಾ ಸಮಾರಂಭ ನಡೆಯಿತು.

ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಂದಾ ಅವರು ವಹಿಸಿದ್ದರು.


ಹಿರಿಯ ಸಹ ಶಿಕ್ಷಕ ಎಂ.ಕೃಷ್ಣ ಭಟ್, ದೈಹಿಕ ಶಿಕ್ಷಣ ಶಿಕ್ಷಕಿ ಸ್ಮಿತಾ, ಶಿಕ್ಷಕರಾದ ಸುರೇಶ್, ಸತೀಶ್, ಚೇತಾಕ್ಷಿ, ನಳಿನಿ, ಸ್ವಾತಿ,
ಮೋಕ್ಷಾ,ಸಚ್ಚಿದಾನಂದ, ಬೋಧಕೇತರ ಸಿಬ್ಬಂದಿಗಳಾದ ಹರೀಶ್, ಹೇಮಾವತಿ, ರಶ್ಮಿ, ಸ್ಮಿತಾ ಹೊಸೋಳಿಕೆ ವೇದಿಕೆಯಲ್ಲಿದ್ದರು.


ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ಅನೇಕ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳು ನಡೆಯಿತು.ಬಹುಮಾನ ವಿಜೇತ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು