ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯ ಸುಕುಮಾರ್ ಇವರು ಸೆ. 14 ರಂದು ಸಿಂಗಾಪುರ್ ಗೆ ಪ್ರಯಾಣ ಬೆಳೆಸಲಿದ್ದಾರೆ.















ಇವರು ಅಮೇರಿಕಾದ ಪ್ರತಿಷ್ಠಿತ “Palomar Technologies” ನಲ್ಲಿ ದಕ್ಷಿಣ ಏಷ್ಯಾದ ಸರ್ವೀಸ್ ಇಂಜಿನಿಯರ್ ಆಗಿ ಕಳೆದ 10 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಂಪೆನಿ ಕೆಲಸದ ನಿಮಿತ್ತ ಸಿಂಗಾಪುರ್ ಗೆ ಪ್ರಯಾಣ ಬೆಳೆಸಲಿರುವ ಇವರು ಕ್ರೀಡಾಕೂಟಗಳ ವೀಕ್ಷಕ ವಿವರಣೆ ಹಾಗೂ ಕಾರ್ಯಕ್ರಮಗಳ ಉದ್ಘೋಷಕರೂ ಆಗಿ ಚಿರಪರಿಚಿತರು. ಇವರು ಪ್ರಸ್ತುತ ಪತ್ನಿ ಸಹನಾ ಸುಕುಮಾರ್, ಪುತ್ರ ವೇದಿಕ್ ಸುಕುಮಾರ್ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಇವರು ಕಂದ್ರಪ್ಪಾಡಿ ಶ್ರೀ ಅಣ್ಣಪ್ಪ ಮತ್ತು ಶ್ರೀಮತಿ ಜಾನಕಿ ದಂಪತಿಗಳ ಪುತ್ರ.










