ದಬ್ಬಡ್ಕ : ಶ್ರೀ ರಾಮ ಯುವಕ ಸಂಘ ಕಾಂತಬೈಲು ವತಿಯಿಂದ ಶ್ರಮದಾನ

0

ಶ್ರೀರಾಮ ಯುವಕ ಸಂಘ (ರಿ) ಕಾಂತಬೈಲು-ದಬ್ಬಡ್ಕ ಇವರ ಮುಂದಾಳತ್ವದಲ್ಲಿ ಊರಿನ ಗ್ರಾಮಸ್ಥರ ಸಹಕಾರದೊಂದಿಗೆ ಡಬ್ಬಡ್ಕ ವ್ಯಾಪ್ತಿಯಲ್ಲಿ ಸೆ.14 ರಂದು ಶ್ರಮದಾನ ಮಾಡಲಾಯಿತು.

ಅನ್ಯಾಳದಿಂದ ದಬ್ಬಡ್ಕದವರೆಗೆ ರಸ್ತೆ ಬದಿಯಲ್ಲಿ ವಿಪರೀತ ಕಾಡು – ಪೊದೆ ಆವರಿಸಿದ್ದು , ವಾಹನ ಚಾಲಕರಿಗೆ ತೆರಳಲು ಕಷ್ಟವಾಗಿತ್ತು. ಇದನ್ನು ಗಮನಿಸಿದ ಶ್ರೀ ರಾಮ ಯುವಕ ಸಂಘ ಕಾಂತಬೈಲು ಡಬ್ಬಡ್ಕ ಸಂಘ ದವರು ಹಾಗೂ ಊರಿನವರ ಸಹಕಾರದೊಂದಿಗೆ ರಸ್ತೆ ಬದಿಯಲ್ಲಿರುವ
ಕಾಡು ಪೊದೆ ಮತ್ತು ಕರೆಂಟ್ ಲೈನ್ ಗೆ ತಾಗಿಕೊಂಡಿರುವಂತಹ ಗಿಡ ಕೊಂಬೆಗಳನ್ನು ಕಡಿದು ಶ್ರಮದಾನ ಮಾಡುವ ಮೂಲಕ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡಿದರು.