ಬೆಳ್ಳಾರೆ ಜೇಸಿ ಸಪ್ತಾಹ ಸಮಾರೋಪ

0

ಗೌರವ ಪುರಸ್ಕಾರ , ವಿಶೇಷ ಪುರಸ್ಕಾರ, ಕಮಲಪತ್ರ ಪುರಸ್ಕಾರ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನ

ವಲಯಾಧ್ಯಕ್ಷರ ಭೇಟಿ, ಶಾಶ್ವತ ಯೋಜನೆಗಳ ಅನಾವರಣ

ಬೆಳ್ಳಾರೆ ಜೇಸಿಐ ಇದರ ಜೇಸಿ ಸಪ್ತಾಹ ‘ಸಪ್ತರ್ಷಿ 2025’ ಅಂಗವಾಗಿ ಏಳು ದಿನ ನಡೆದ ವಿವಿಧ ಕಾರ್ಯಕ್ರಮಗಳು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸಮಾರೋಪಗೊಂಡಿತು.

ಸಮಾರೋಪ ಸಮಾರಂಭದಲ್ಲಿ ವೈದಿಕ ವಿದ್ವಾoಸ ವೇದಮೂರ್ತಿ ಶಂಭು ಭಟ್ಟ ಅವರಿಗೆ ಗೌರವ ಪುರಸ್ಕಾರ, ಅಂತಾರಾಷ್ಟ್ರೀಯ ಆರ್ಯಭಟ ಪುರಸ್ಕೃತ ಪ್ರಮೋದ್ ಕುಮಾರ್ ರೈ ಕಲಾಮಂದಿರ್ ಅವರಿಗೆ ವಿಶೇಷ ಪುರಸ್ಕಾರ, ಧನ್ಯಶ್ರೀ ಎನ್ ನೆಲ್ಲಿಗುಡ್ಡೆ, ವಿನ್ಯಾಸ್ ಜಾಕೆ, ಮತ್ತು ತನ್ವಿ ಅರ್ನಾಡಿ ಅವರಿಗೆ ಪ್ರತಿಭಾ ಪುರಸ್ಕಾರ ಮತ್ತು ಜೇಸಿಐ ಬೆಳ್ಳಾರೆಯ ಪೂರ್ವಾಧ್ಯಕ್ಷ ಲೋಕೇಶ್ ತಂಟೆಪ್ಪಾಡಿ ಅವರಿಗೆ ಕಮಲಪತ್ರ ಪುರಸ್ಕಾರ ಪ್ರದಾನ ಮಾಡಲಾಯಿತು.

ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ ಪುರಸ್ಕೃತರ ಬಗ್ಗೆ ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಐವನ್ ಲೋಬೋ ಮತ್ತು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆ ಮಾತನಾಡಿದರು. ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಬೀಡು ಅಧ್ಯಕ್ಷತೆ ವಹಿಸಿದ್ದರು.

ನಿಕಟಪೂರ್ವಾಧ್ಯಕ್ಷ ಜಗದೀಶ್ ರೈ ಪೆರುವಾಜೆ, ಕಾರ್ಯದರ್ಶಿ ಉಮೇಶ್ ಮಣಿಕ್ಕಾರ ಉಪಸ್ಥಿತರಿದ್ದರು. ಸಪ್ತಾಹ ನಿರ್ದೇಶಕಿ ಪೂರ್ಣಿಮಾ ಪೆರ್ಲಂಪಾಡಿ ವಂದಿಸಿದರು.


ಜೇಸಿ ಕುಟುಂಬ ಸಮ್ಮಿಲನ
ಸಪ್ತಾಹದ ೫ನೇ ದಿನ ಪೂರ್ವಧ್ಯಕ್ಷ ಪ್ರೀತಮ್ ರೈ ಅವರ ಪೆರುವಾಜೆಯ ಇಂದಿರಾ ನಿವಾಸದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಪೂರ್ವಾಧ್ಯಕ್ಷ ಮಿಥುನ್ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಮತ್ತು ಲಿಂಗಪ್ಪ ಬೆಳ್ಳಾರೆ ಜೇಸಿ ಸದಸ್ಯರಿಗೆ ಹಾಗೂ ಕುಟುಂಬ ಸದಸ್ಯರಿಗೆ ವಿವಿಧ ಮೋಜಿನ ಸ್ಪರ್ಧೆಗಳನ್ನು ನಡೆಸಿದರು.


ವಲಯಾಧ್ಯಕ್ಷರ ಭೇಟಿ, ಶಾಶ್ವತ ಯೋಜನೆಗಳ ಅನಾವರಣ ಸಪ್ತಾಹದ ೬ನೇ ದಿನ ಜೇಸಿಐ ವಲಯ 15ರ ವಲಯಾಧ್ಯಕ್ಷರ ಅಧಿಕೃತ ಭೇಟಿ ‘ಅಭಿಯಾನ’ ನಡೆಯಿತು.

ವಲಯಾಧ್ಯಕ್ಷ ಜೇಸಿಐ ಸೆನೆಟರ್ ಅಭಿಲಾಷ್ ಬಿ ಎ, ವಲಯ ಉಪಾಧ್ಯಕ್ಷ ಜೇಸಿಐ ಸೆನೆಟರ್ ಸುಹಾಸ್ ಎ ಪಿ ಎಸ್ ಮರಿಕೆ ನೆಟ್ಟಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೇಸಿ ಪದ್ಮನಾಭ ಕಲಾಸುಮ ಪ್ರಾಯೋಜಕತ್ವದ ನಾಮಫಲಕ ಮತ್ತು ವೇದಿಕೆ ವಿನ್ಯಾಸ, ಬೆಳ್ಳಾರೆ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಜೇಸಿ ಲಿಂಗಪ್ಪ ಬೆಳ್ಳಾರೆ ಪ್ರಾಯೋಜಕತ್ವದ ಉದ್ಯಾನವನ, ಬೆಳ್ಳಾರೆ ಸಾರ್ವಜನಿಕ ಗ್ರಂಥಾಲಯದಲ್ಲಿ ಜೇಸಿ ಗೌತಮಿ ಕ್ಯೊಂಗುಳಿ ಪ್ರಾಯೋಜಕತ್ವದ ಪುಸ್ತಕ ಕೊಡುಗೆಗಳನ್ನು ಅನಾವರಣಗೊಳಿಸಿದರು.

ಬಳಿಕ ಜ್ಞಾನದೀಪ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ವಲಯಧ್ಯಕ್ಷರನ್ನು ಬೆಳ್ಳಾರೆ ಜೇಸಿಐ ವತಿಯಿಂದ ಸನ್ಮಾನಿಸಲಾಯಿತು.

ವರದಿ : ಉಮೇಶ್ ಮಣಿಕ್ಕಾರ