ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಮತ್ತು ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಬಾಲ ಗೋಕುಲ ಪ್ರಶಿಕ್ಷಣ ವರ್ಗವು ಸುಳ್ಯದ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ದಿ|ವಿಜಯಕುಮಾರ್ ಸಭಾಭವನದಲ್ಲಿ ಸೆ.20 ರಂದು ನಡೆಯಿತು.









ಪ್ರಾಂತ ಸೇವಾ ಪ್ರಮುಖರಾದ ನ.ಸೀತಾರಾಮ್, ಉಮೇಶ್ ಪ್ರಾಂತ ಬಾಲಗೋಕುಲ ಪ್ರಮುಖ್ ವಿಭಾಗ ಸಹ ಸೇವಾ ಪ್ರಮುಖರಾದ ಡಾ| ಮನೋಜ್, ಜಿಲ್ಲೆಯ ಸೇವಾ ಪ್ರಮುಖರಾದ ವಿಜಯ್ ಉಜಿರೆ, ತಾಲೂಕು ಸಂಘ ಚಾಲಕರಾದ ಚಂದ್ರಶೇಖರ ತಳೂರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ತಾಯಂದಿರು, ಮಾತಾಜಿಯವರು, ನಿವೃತ್ತ ಶಿಕ್ಷಕಿಯರು, ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪುಟಾಣಿ ಮಕ್ಕಳು ಭಾರತಮಾತೆ ಮತ್ತು ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಅನುಷ್ಠಾನ ಸಮಿತಿ ಸದಸ್ಯೆ ದಿವ್ಯಲತಾ ಪೇರಾಲ್ ದೇಶಭಕ್ತಿ ಗೀತೆ ಹಾಡಿದರು. ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪುಷ್ಪಮೇದಪ್ಪ ಸ್ವಾಗತಿಸಿದರು.










