ಸುಳ್ಯದ ಪ್ರೀತಿ ಮೊಬೈಲ್ಸ್ ನಲ್ಲಿ ಐಫೋನ್‌ 17 ಪ್ರೋ ಬಿಡುಗಡೆ- ಪ್ರಥಮ ಗ್ರಾಹಕರಿಗೆ ಹಸ್ತಾಂತರ

0

ಸುಳ್ಯದ ಕೆ.ಎಸ್.ಆರ್.ಟಿ. ಸಿ ಬಸ್ ನಿಲ್ದಾಣದ ಎದುರಿನಲ್ಲಿರುವ ಸೂಂತೋಡು ಎಂಪೋರಿಯಮ್ ನಲ್ಲಿರುವ ಪ್ರತಿಷ್ಠಿತ ಮೊಬೈಲ್ ಮಾರಾಟ ಮತ್ತು ಸರ್ವಿಸ್ ಮಳಿಗೆ ಪ್ರೀತಿ ಮೊಬೈಲ್ಸ್ ನಲ್ಲಿ ಬ್ರಾಂಡೆಡ್ ಐಪೋನ್ 17 ಮೊಬೈಲ್ ಫೋನ್ ನ್ನು ಸುದ್ದಿ ವರದಿಗಾರ ಶಿವಪ್ರಸಾದ್ ಅಲೆಟ್ಟಿ ಬಿಡುಗಡೆಗೊಳಿಸಿದರು.

ಐಪೋನ್ 17 ಪ್ರೋ ಪ್ರಥಮ ಗ್ರಾಹಕರಾದ ಅಪೋಲೋ ಫಾರ್ಮಸಿ ಉದ್ಯೋಗಿ ಅರಂಬೂರಿನ ಅಶೋಕ್ ರಿಗೆ ಮೊಬೈಲ್ ಫೋನ್ ನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಹಿತೈಷಿಗ್ರಾಹಕರು ಹಾಗೂ
ಸಂಸ್ಥೆಯ ಮಾಲಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತ ರಿದ್ದರು. ಶೈಲೇಶ್ ಅರಂಬೂರು ಕಾರ್ಯಕ್ರಮ ನಿರ್ವಹಿಸಿದರು.