ಐವರ್ನಾಡು : ಒಕ್ಕಲಿಗ ಗೌಡ ಸಂಘದ ವತಿಯಿಂದ ಮಾರ್ಗದರ್ಶನ ಕಾರ್ಯಕ್ರಮ

0

ರಾಜ್ಯ ಒಕ್ಕಲಿಗರ ಸಂಘ, ಗೌಡರ ಯುವ ಸೇವಾ ಸಂಘ ಸುಳ್ಯ, ಗೌಡರ ಗ್ರಾಮ ಸಮಿತಿ, ಮಹಿಳಾ ಘಟಕ, ಯುವ ಘಟಕ ಐವರ್ನಾಡು ಇವರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸಮಾಜದವರು ಜಾತಿಗಣತಿ ನಡೆಯುವಾಗ ಸುಮಾರು 60 ಪ್ರಶ್ನೆಗಳಿಗೆ ಸೂಕ್ತ, ಸಮರ್ಪಕ ಉತ್ತರಗಳನ್ನು ನೀಡುವ ಬಗ್ಗೆ ಸಮುದಾಯದವರಿಗೆ ಮಾರ್ಗದರ್ಶನ ಹಾಗೂ ತರಬೇತಿಯು ಸೆ. 20 ರಂದು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ 60 ಕಾಲಂಗಳನ್ನು ಭರ್ತಿ ಮಾಡುವ ಬಗ್ಗೆ ಮಾಹಿತಿಯನ್ನು ತಾಲೂಕು ಗೌಡರ ಯುವ ಸೇವಾ ಸಂಘ ಖಜಾಂಜಿ ದಿನೇಶ್ ಮಡ್ತಿಲ ನೀಡಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್‌ ಸಭಿಕರ ಎಲ್ಲಾ ಸಂಶಯಗಳಿಗೆ ಸೂಕ್ತವಾದ ಉತ್ತರಗಳನ್ನು ದಾಖಲೆ ಸಮೇತ ವಿವರಿಸಿದರು. ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆಯವರು ಗೌಡ ಸಮುದಾಯದ ಸಾಮಾಜಿಕ ಬದಲಾವಣೆಗಳ ಬಗ್ಗೆ ವಿವರಿಸಿದರು.

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.‌ ಮನ್ಮಥರವರು ಸಂದರ್ಭೊಚಿತವಾಗಿ ಮಾತನಾಡಿದರು. ಅಂತಿಮವಾಗಿ ಒಕ್ಕಲಿಗ ಗೌಡ ಸಮುದಾಯದವರೆಲ್ಲರೂ ಜಾತಿಗಣತಿ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ “ಒಕ್ಕಲಿಗ” ಎಂದೂ, ಉಪಜಾತಿ ಕಾಲಂನಲ್ಲಿ “ಗೌಡ” ಎಂದೂ ಮಾತೃ ಭಾಷೆ ಕಾಲಂನಲ್ಲಿ ಅರೆಭಾಷೆ ಅಥವಾ ತುಳು ಎಂದು ನಮೂದಿಸುವಂತೆ ಸೂಚಿಸಲಾಯಿತು. ಈ ಸಭೆಯಲ್ಲಿ ಐವರ್ನಾಡು ಗ್ರಾಮದ ಸುಮಾರು 80 ಜನ ಪ್ರಮುಖರು ಹಾಜರಿದ್ದರು.

ಗ್ರಾಮ ಸಮಿತಿ ಅಧ್ಯಕ್ಷ ರಮೇಶ್‌ ಮಿತ್ತಮೂಲೆ ವಂದಿಸಿದರು.
ಚಿದಾನಂದ ಬಾಂಜಿ ಕೋಡಿಯವರು ನಿರೂಪಿಸಿದರು.
ವೇದಿಕೆಯಲ್ಲಿ ಗೌಡರ ಗ್ರಾಮ ಸಮಿತಿ ಅಧ್ಯಕ್ಷ ರಮೇಶ್‌ ಮಿತ್ತಮೂಲೆ, ತಾಲೂಕು ಮಹಿಳಾ ಘಟಕ ನಿರ್ದೇಶಕಿ ಶ್ರೀಮತಿ ಚಂಚಲಾಕ್ಷಿ ಕತ್ಲಡ್ಕ,ತಾಲೂಕು ಮಹಿಳಾ ಘಟಕ
ಖಜಾಂಜಿ ಶ್ರೀಮತಿ ಜಯಶ್ರೀ ಪಲ್ಲತ್ತಡ್ಕ, ಸುಳ್ಯ ಗೌಡರ ಯುವ ಸೇವಾ ಸಂಘದ ಖಜಾಂಜಿ ದಿನೇಶ್‌ ಮಡ್ತಿಲ,ಗೌಡರ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವರಾಮ ನೆಕ್ರೆಪ್ಪಾಡಿ, ಗೌಡರ ಮಹಿಳಾ ಘಟಕ ಅದ್ಯಕ್ಷೆ ಶ್ರೀಮತಿ ಸುಜಾತಾ ಚಂದ್ರಕಾಂತ, ಗೌಡರ ಯುವ ಘಟಕ ಅಧ್ಯಕ್ಷ ದೇವಪ್ರಸಾದ್‌,ಪ್ರಧಾನ ಕಾರ್ಯದರ್ಶಿ, ಗೌಡರ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಚಿದಾನಂದ ಬಾಂಜಿಕೋಡಿ, ಪ್ರಧಾನ ಕಾರ್ಯದರ್ಶಿ, ಗೌಡರ ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇವತಿ ಬೋಳುಗುಡ್ಡೆ ಉಪಸ್ಥಿತರಿದ್ದರು.