ಎಲ್ಲಾ ವಿಧದ ಕೃಷಿ ಉಪಕರಣಗಳ ದುರಸ್ತಿ ಮತ್ತು ಮಾರಾಟ
ಪಂಜದ ಕಮಿಲ ಕಾಂಪ್ಲೆಕ್ಸ್ ನಲ್ಲಿ ಹಿತೇಶ್ ಪಂಜದಬೈಲು ರವರ ಮಾಲಿಕತ್ವದ ಪಂಚಶ್ರೀ ಎಂಟರ್‌ಪ್ರೈಸಸ್ ಸೆ.25 ರಂದು ಪೂರ್ವಾಹ್ನ ಗಂಟೆ 9ಕ್ಕೆ ಶುಭಾರಂಭ ಗೊಳ್ಳಲಿದೆ.
ಹಿರಿಯ ವೈದ್ಯರಾದ ಡಾ| ರಾಮಯ್ಯ ಭಟ್ ಪಂಜ ಉದ್ಘಾಟಿಸಲಿದ್ದಾರೆ.








ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ಸುಳ್ಯ ಎ ಪಿ ಎಂ ಸಿ ಮಾಜಿ ಅಧ್ಯಕ್ಷ ಮಾಧವ ಗೌಡ ಜಾಕೆ ಮೊದಲಾದ ಗಣ್ಯರು ಉಪಸ್ಥಿತರಿರುವರು.
ನಮ್ಮಲ್ಲಿ ಎಲ್ಲಾ ವಿಧದ ಕೃಷಿ ಉಪಕರಣಗಳ ದುರಸ್ತಿ ಮತ್ತು ಮಾರಾಟ ಇರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.









