ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪ.ಸಹಕಾರ ಸಂಘಕ್ಕೆ ಸ್ಕ್ಯಾಡ್ಸ್ ನ ಸಮಗ್ರ ಪ್ರಶಸ್ತಿ

0


ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದ.ಕ ಕೃಷಿ ಅಭಿವೃದ್ಧಿ ಸಹಕಾರ ಸಂಘ ಕೊಡಮಾಡುವ ,ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸಮಗ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಇಂದು ಮಂಗಳೂರಿನಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಸ್ಕ್ಯಾಡ್ಸ್ ಅದ್ಯಕ್ಷರಾದ ರವೀಂದ್ರ ಕಂಬಳಿ ಮತ್ತು ನಿರ್ದೇಶಕರಾದ ರವಿ ಬಸಪ್ಪ ರವರು ಪಯಸ್ವಿನಿ ಪ್ರಾ.ಕೃ.ಪ.ಸ.ಸಂಘದ ಅದ್ಯಕ್ಷರು ಯನ್.ಸಿ.ಅನಂತ್ ಊರುಬೈಲು ಮತ್ತು ಸಿ ಇ ಒ ಬಿ.ಕೆ.ಆನಂದ ರವರಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಶ್ರೀಮತಿ ವಾಣಿ ಜಗದೀಶ್ ಮತ್ತು ಪುಂಡರೀಕ ಅರಂಬೂರು ಉಪಸ್ಥಿತರಿದ್ದರು.