ಭಾರತೀಯ ಜನತಾ ಪಾರ್ಟಿ ಬಿ. ಡಿ. ಒ ವಾರ್ಡಿನ ಶಕ್ತಿ ಕೇಂದ್ರದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆಯನ್ನು ಸೆ. 25ರಂದು ನರೇಂದ್ರ ವಿಹಾರ ಅಂಬಟೆಡ್ಕದ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು.















ದೀನ್ ದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ ದೀನ್ ದಯಾಳ್ ಉಪಾಧ್ಯಯರ ಕುರಿತು ಭೌದ್ಧಿಕ್ ನೀಡಿದರು. ಈ ಸಂದರ್ಭದಲ್ಲಿ ನಗರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾದರ. ಎ. ಟಿ, ನಗರ ಪಂಚಾಯತ್ ಸದಸ್ಯರಾದ ಪೂಜಿತ ಶಿವಪ್ರಸಾದ್ ಕೇರ್ಪಳ, ಸುಧಾಕರ್ ಕುರುಂಜಿಭಾಗ್, ಕಿಶೋರಿ ಶೇಟ್, ಶೀಲಾವತಿ ಕುರುಂಜಿ, ಬೆಜೆಪಿ ಮಂಡಲ ಕಾರ್ಯಕಾರಿಣಿ ಸದಸ್ಯರಾದ ಬೂಡು ರಾಧಾಕೃಷ್ಣ ರೈ,
ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ಯುವ ಮೋರ್ಚಾ ಮಂಡಲ ಉಪಾಧ್ಯಕ್ಷ ಸುನಿಲ್ ಕೇರ್ಪಳ, ದಯಾನಂದ ಕೇರ್ಪಳ,ಚಂದ್ರಶೇಖರ ಕೇರ್ಪಳ, ಕಿರಣ ಕುರುಂಜಿ, ಚಂದ್ರಶೇಖರ ರಾವ್ ಕೇರ್ಪಳ, ರಘುರಾಮ ಕೇರ್ಪಳ, ಪ್ರದೀಪ್ ರೈ ಬೂಡು, ಮಾದವ ರಾವ್ ಪರಿವಾರ, ಗೋಪಾಲ. ಎಸ್. ನಡುಬೈಲ್,ಉಮೇಶ್ ಪ್ರಭು ಉಪಸ್ಥಿತರಿದ್ದರು.
ದಯಾನಂದ ಕೇರ್ಪಳ ಸ್ವಾಗತಿಸಿ,ಸುನಿಲ್ ಕೇರ್ಪಳ ವಂದಿಸಿದರು. ಜನ್ಮ ದಿನಾಚರಣೆಯ ಪ್ರಯುಕ್ತ ಸಿಹಿ ಹಂಚಲಾಯಿತು.










