ಕಲ್ಮಡ್ಕ ಶ್ರೀರಾಮ ಮಂದಿರದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ

0

ದೇವರ ಧ್ಯಾನ ಮತ್ತು ಭಕ್ತಿಯಿಂದ ಆನಂದ ಲಭಿಸುತ್ತದೆ – ಡಾ. ವೀಣಾ ಪಾಲಚಂದ್ರ

ನಮಗೆ ಎಷ್ಟೇ ಜನ್ಮಗಳಿದ್ದರೂ ಮನುಷ್ಯ ಜನ್ಮದಲ್ಲಿ ಮಾತ್ರ ಭಗವಂತನನ್ನು ಆರಾಧಿಸಲು ಸಾಧ್ಯ. ನಾವು ಒಳ್ಳೆಯ ಮನಸ್ಸಿನಿಂದ ಸನ್ಮಾರ್ಗ, ಸತ್ಕಾರ್ಯಗಳಿಂದ ಬದುಕಿದಾಗ, ನಮ್ಮ ನಡವಳಿಕೆಯಿಂದ ನಮಗೂ ಇತರರಿಗೂ ಒಳಿತಾದರೆ ಆಗ ಧರ್ಮದ ಆಚರಣೆಯಾಗುತ್ತದೆ. ಪ್ರಪಂಚದಲ್ಲಿ ಎಲ್ಲವೂ ನಾಶವಾಗುತ್ತದೆ ಆದರೆ ದೇವರ ಇರುವಿಕೆ ಶಾಶ್ವತವಾದದ್ದು ಎಂದು ಆರೋಗ್ಯ ತಜ್ಞೆ ಡಾ. ವೀಣಾ ಪಾಲಚಂದ್ರ ಹೇಳಿದರು. ಅವರು ಸೆ. 28ರಂದು ಕಲ್ಮಡ್ಕದ ಶ್ರೀರಾಮ ಮಂದಿರದಲ್ಲಿ ವೈದೇಹಿ ಯುವತಿ ಮಂಡಲದ ಆಶ್ರಯದಲ್ಲಿ ನಡೆದ 10ನೇ ವರ್ಷದ ಶಾರದೋತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಕಲ್ಮಡ್ಕ ಶ್ರೀರಾಮ ಸೇವಾ ಟ್ರಸ್ಟ್‌ನ ಅಧ್ಯಕ್ಷ ರಮೇಶ್ ಭಟ್ ತಿಪ್ಪನಕಜೆ ಅಧ್ಯಕ್ಷತೆ ವಹಿಸಿದ್ದರು. ಕಲ್ಮಡ್ಕ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಮೋಹಿನಿ ಲತೇಶ್, ಕಲ್ಮಡ್ಕ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಸುಲೋಚನ ಎಡಪತ್ಯ, ನಿವೃತ್ತ ಆರೋಗ್ಯ ಸಹಾಯಕಿ ಶ್ರೀಮತಿ ಶಾರದಾ ಪಂಬೆತ್ತಾಡಿ ಅತಿಥಿಗಳಾಗಿ ಭಾಗವಹಿಸಿದ್ದರು. ವೈದೇಹಿ ಯುವತಿ ಮಂಡಲದ ಸ್ಥಾಪಕಾಧ್ಯಕ್ಷೆ ಶ್ರೀಮತಿ ರೂಪ ಸಾಯಿನಾರಾಯಣ, ಕಾರ್ಯದರ್ಶಿ ಶ್ರೀಮತಿ ಲೀಲಾವತಿ ಆರ್.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಚಂದ್ರಾವತಿ, ಸ್ವಾವಲಂಬಿ ಉದ್ಯೋಗಿಗಳಾದ ಶ್ರೀಮತಿ ಸೀತಾಲಕ್ಷ್ಮೀ ಭಟ್, ಶ್ರೀಮತಿ ಪುಷ್ಪಾವತಿಯವರನ್ನು ಸನ್ಮಾನಿಸಲಾಯಿತು. ಖೋಖೋ ಪಂದ್ಯಾಟದಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಕು. ಅನ್ವಿತಾರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಶ್ರೀಮತಿ ಭಾಗೀರಥಿ ಕಾಚಿಲ, ಶ್ರೀಮತಿ ಅನುರಾಧಾ, ಶ್ರೀಮತಿ ಯಮುನಾ ಓಟೆಕಜೆ ಮತ್ತು ಕು. ಆತ್ಮೀಯ ಕಾಚಿಲ ಸನ್ಮಾನಿತರ ಸನ್ಮಾನಪತ್ರ ವಾಚಿಸಿದ ಕು. ದೀಪ್ತಿ ಮತ್ತು ಕು. ರಕ್ಷಾ ಆರ್.ಪಿ ಪ್ರಾರ್ಥಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಮಂಜುಳಾ ನಂಗಾರು ಸ್ವಾಗತಿಸಿ, ಕು. ಗ್ರೀಷ್ಮಾ ವಂದಿಸಿದರು. ಶ್ರೀನಿವಾಸ ಜೋಗಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಕು. ಅಶ್ವಿನಿ ಜೋಗಿಬೆಟ್ಟು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಬೆಳಿಗ್ಗೆ ಶಾರದಾ ದೇವಿಯ ಪ್ರತಿಷ್ಠಾಪನೆ, ಗಣಪತಿ ಹೋಮ, ಭಜನೆ, ಅಕ್ಷರಾಭ್ಯಾಸ, ವಾಹನ ಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ವಿಶೇಷ ಆಕರ್ಷಣೆಯೊಂದಿಗೆ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ ನಡೆಯಲಿದೆ. ಸಂಜೆ 4.30ರಿಂದ ಶ್ರೀ ಮಹಾವಿಷ್ಣು ಸಿಂಗಾರಿಮೇಳ ಬಾಳಿಲ-ಮುಪ್ಪೇರ್ಯ ತಂಡದ ಸದಸ್ಯರಿಂದ ಯಕ್ಷಗಾನ ಬಯಲಾಟ ಗಜೇಂದ್ರ ಮೋಕ್ಷ ನಡೆಯಲಿದೆ.