ತುರ್ತು ಕ್ರಮ ವಹಿಸುವಂತೆ ಕಡಬ ತಾಲೂಕು ಕೆಡಿಪಿ ಸದಸ್ಯ ಶಿವರಾಮ ರೈ ಅವರಿಂದ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಲವಾರು ಕಡತಗಳು ಸರಿಯಾದ ಸಮಯಕ್ಕೆ ವಿಲೇವಾರಿ ಆಗದೇ ಧಾರ್ಮಿಕ ನಂಬಿಕೆ ಹಾಗು ಶಿಕ್ಷಣ ಸಂಸ್ಥೆಗಳಿಗೆ ತೊಂದರೆಯಾಗಿರುವ ಬಗ್ಗೆ ತುರ್ತು ಕ್ರಮ ವಹಿಸುವಂತೆ ಕಡಬ ತಾಲೂಕು ಕೆಡಿಪಿ ಸದಸ್ಯ ಶಿವರಾಮ ರೈ ಆವರು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.















ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ತೆಂಗಿನಕಾಯಿ ಟೆಂಡರ್ ಆಗಿ ಕೆಲವು ತಿಂಗಳು ಕಳೆದರೂ ಅದೇಶ ಪತ್ರ ಕೊಡದ ಹಿನ್ನೆಲೆ ತೆಂಗಿನಕಾಯಿ ಸರಬರಾಜು ಆಗುತ್ತಿಲ್ಲ. ಇದರಿಂದ ಈಗ ಮಂಗಳೂರಿನ ಜನತಾ ಬಜಾರಿನಿಂದ ತಾತ್ಕಾಲಿಕವಾಗಿ ಮೊತ್ತಕ್ಕೆ ಖರೀದಿ ನಡೆಯುತ್ತಿದೆ. ಇದರಿಂದ ಮುಂದೆ ತೆಂಗಿನಕಾಯಿ ಇಲ್ಲದೆ ಪೂಜೆಗಳು ನಿಲುಗಡೆಯಾಗಿ ಧಾರ್ಮಿಕ ನಂಬಿಕೆಗೆ ದಕ್ಕೆಯಾಗುವುದು. ದೇವಳದ ವಿದ್ಯಾಸಂಸ್ಥೆಯಲ್ಲಿರುವ ಹಲವು ಉಪನ್ಯಾಸಕರಿಗೆ 6 ತಿಂಗಳಿಂದ ವೇತನ ಪಾವತಿಯಾಗಿರುವುದಿಲ್ಲ ಹಾಗು ದೇವಳದ ವಾರ್ಷಿಕ ಬಜೆಟ್‌ನ ಹಲವಾರು ಕಡತ ಬೆಂಗಳೂರಿನ ಆಯುಕ್ತರ ಕಛೇರಿಯಲ್ಲಿ ಕೊಳೆಯುತ್ತಾ ಇದ್ದು ಮಂಜೂರಾತಿಗೊಂಡಿರುವುದಿಲ್ಲ.
ಒಂದು ವರ್ಷದ ಬಜೆಟ್ ಮಂಜೂರಾತಿ ಮಾಡಿಕೊಂಡು ಖರ್ಚು ಮಾಡಬೇಕಾಗಿದ್ದರೂ ಈ ಕಾನೂನು ಪಾಲನೆಯಾಗುತ್ತಿಲ್ಲ .ಇದರಿಂದ ದೇವಳಕ್ಕೆ ಲಕ್ಷಾನುಗಟ್ಟಲೆ ನಷ್ಟ ಹಾಗು ಇತರ ತೊಂದರೆಗಳು ಆಗುತ್ತಿದೆ . ಆದುದರಿಂದ ತಾವು ಸಮಗ್ರ ಪರಿಶೀಲನೆ ನಡೆಸಿ ಸಂಬಂದಿಸಿದ ಗುಮಾಸ್ತರು ಹಾಗೂ ಅಧಿಕಾರಿಗಳಿಗೆ ತಕ್ಷಣ ಕ್ರಮ ವಹಿಸಲು ಸೂಚನೆ ನೀಡುವಂತೆ ಅವರು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.










