ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಅರೆಭಾಷೆ ಸಿನಿಮಾ ‘ನಡುಬೆಟ್ಟು ಅಪ್ಪಣ್ಣ’ ಬಿಡುಗಡೆ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಉಪಸ್ಥಿತಿ

0

ವಿಶ್ವವಿಖ್ಯಾತ ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಅರೆಭಾಷೆ ಸಿನಿಮಾ ‘ನಡುಬೆಟ್ಟು ಅಪ್ಪಣ್ಣ’ ಬಿಡುಗಡೆ, ಸೆ. 19ರಂದು ಬಿಡುಗಡೆಗೊಂಡಿತು. ಈ ಸಂದರ್ಭದಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಉಪಸ್ಥಿತರಿದ್ದು, ಶುಭ ಹಾರೈಸಿದರು. ಖ್ಯಾತ ನಿರ್ದೇಶಕರಾದ ಶ್ರೀಮತಿ ಅನುಪಮಾ ಶರದಿ, ಜಿಯೋ ಸಿಮಾನ್, ಕಲ್ಯಾಣ್ ರಾವ್, ಸಂಗೀತ ನಿರ್ದೇಶಕರಾದ ಕುಮಾರ ಈಶ್ವರ್, ಅಕಾಡೆಮಿ ಸದಸ್ಯೆ ಲತಾ ಕುದ್ಪಾಜೆ, ಮುಖ್ಯ ಪಾತ್ರದ ಖ್ಯಾತ ಲೇಖಲ ನಟರಾಜ್ ಹೊನ್ನವಳ್ಳಿ, ಸೇರಿದಂತೆ ಅನೇಕ‌ ಚಲನಚಿತ್ರ ನಟರು, ಉದ್ಯಮಿಗಳು ಉಪಸ್ಥಿತರಿದ್ದರು.

ಈ ಚಲನಚಿತ್ರ ಕೊಡಗಿನ ದಬ್ಬಡ್ಕ, ಸುಳ್ಯ ತಾಲೂಕಿನ ಅರಂತೋಡು, ‌ತೊಡಿಕಾನ, ಅಡ್ತಲೆ, ಕಾಯಾರ, ಮರ್ಕಂಜದ ಆಸುಪಾಸಿನಲ್ಲಿ ಚಿತ್ರೀಕರಣಗೊಂಡಿದೆ. ಚಲನಚಿತ್ರ ಸಂಪೂರ್ಣ ಅರೆಭಾಷೆಯಲ್ಲಿದ್ದು, ಸುಳ್ಯ ಮತ್ತು ಪುತ್ತೂರು ತಾಲೂಕಿನ ಹಲವರು ನಟಿಸಿದ್ದು, ಮುಖ್ಯ ಪಾತ್ರದಲ್ಲಿ ನಟರಾಜ ಹೊನ್ನವಳ್ಳಿ, ಧನುಶ್ ಮೈಸೂರು, ಶಿಲ್ಪಾ ನಾಗರಾಜು, ಸುಳ್ಯದ ಭವಾನಿಶಂಕರ ಅಡ್ತಲೆ, ಲೋಕೇಶ್ ಊರುಬೈಲು, ರಘುನಾಥ ಜಟ್ಟಿಪಳ್ಳ, ಜೀವನ್ ಕೆರೆಮೂಲೆ, ಗಂಗಾಧರ ಬಡ್ಡಡ್ಕ, ಸುಮತಿ ಜಯನಗರ, ಕಿಶಾನ್‌ ಕಾಯಾರ, ರವಿ ಪೆರ್ಲಂಪಾಡಿ, ಜಗನ್ನಾಥ ಕಾಯಾರ ಮೊದಲಾದವರು ನಟಿಸಿದ್ದಾರೆ. ಜೀವನಕ್ಕೆ ಉತ್ತಮ ಸಂದೇಶವನ್ನು ಕೊಡುವ ಚಲನಚಿತ್ರ ಇದಾಗಿದ್ದು, ಖ್ಯಾತ ನಿರ್ಮಾಪಕಿ ಹಾಗೂ ನಿರ್ದೇಶಕಿ ಅನುಪಮಾ ಶರದಿ ಬೆಂಗಳೂರು ರಚಿಸಿದ್ದಾರೆ.

93 ನಿಮಿಷಗಳ ಕಾಲಮಿತಿ ಹೊಂದಿರುವ ಈ ಚಲನಚಿತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಚಲನಚಿತ್ರೋತ್ಸವ ಪ್ರಶಸ್ತಿಯನ್ನು ಹೈದರಾಬಾದ್ ಚಾರ್ ಮಿನಾರ್ 2025ರಂತೆ ಪಡೆದುಕೊಂಡ ಮೊದಲ ಅರೆಭಾಷೆ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಭವಾನಿಶಂಕರ ಅಡ್ತಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.