ತಿಬ್ಬಾಸ್ ಗ್ರೂಪ್ ಮೈಸೂರಿನಲ್ಲಿ ಆಯೋಜಿಸಿದ್ದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಸುಳ್ಯ ತಾಲೂಕಿನ ದೊಡ್ಡಡ್ಕ ಬೀಜದಕಟ್ಟೆಯ ಸಮೃದ್ಧಿ ಎಸ್. ಪ್ರಿನ್ಸೆಸ್ ಆಫ್ ಸೌತ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾಳೆ.








ಸ್ಪರ್ಧೆಯಲ್ಲಿ ನೀಡಿದ ಎಲ್ಲಾ ಟಾಸ್ಕ್ ಗಳನ್ನು ನಿಭಾಯಿಸಿ, ಟ್ರಡೀಷನಲ್ ಮತ್ತು ಪಾರ್ಟಿ ವೇರ್ ಡ್ರೆಸ್‌ಗಳಲ್ಲಿ ಮಿಂಚಿ ಕಿರೀಟ ಪಡೆದುಕೊಂಡಳು. ವಸ್ತ್ರವಿನ್ಯಾಸವನ್ನು ಕಲರ್ಸ್ ಟೈಲರ್‌ನ ರಜನಿಯವರು ಮಾಡಿರುತ್ತಾರೆ. ಸಮೃದ್ಧಿ ಎಸ್. ಸುಳ್ಯ ನಗರ ಪಂಚಾಯತ್ ಉದ್ಯೋಗಿ ಆಶಾ ಬಿ.ಆರ್ ಮತ್ತು ಎಸ್‌ಡಿಎಂ ಉದ್ಯೋಗಿ ಸದಾನಂದ ದಂಪತಿಯ ಪುತ್ರಿ. ಮಾರುತಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ 3ನೇ ತರಗತಿಯ ವಿದ್ಯಾರ್ಥಿನಿ.










