ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ವತಿಯಿಂದ ೩೮ ನೇ ವರ್ಷದ ಶ್ರೀ ಶಾರದೋತ್ಸವವು ಅ.೦೨ ರಂದು ಬೆಳ್ಳಾರೆ ಅಚಲಾಪುರ ಕಟ್ಟೆಯ ಬಳಿ ಪ್ರಾರಂಭಗೊಂಡಿದೆ.
ಬೆಳಿಗ್ಗೆ ಶಾರದಾ ಪ್ರತಿಷ್ಠೆ, ವಿದ್ಯಾರಂಭ (ಅಕ್ಷರಾಭ್ಯಾಸ) ಶಾರದಾ ಸಹಸ್ರನಾಮಾರ್ಚನೆ,ಅಷ್ಟೋತ್ತರನಾಮಾರ್ಚನೆ,ಆಯುಧ ಪೂಜೆ ಸೇವೆಗಳು ನಡೆಯಿತು.









ಗಂಟೆ ೧೦.೦೦ ರಿಂದ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡಿದ್ದು ಸಂಜೆ ಗಂಟೆ ೪.೦೦ ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ ೯.೦೦ ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ನಡೆದ ಬಳಿಕ ಶ್ರೀ ದೇವಿಯ ವೈಭವದ ಶೋಭಾಯಾತ್ರೆ ನಡೆದು ಜಲಸ್ತಂಭನ ನಡೆಯಲಿದೆ.
ಶೋಭಾಯಾತ್ರೆಗೆ ವಿಶೇಷ ಆಕರ್ಷಣೆಯಾಗಿ ಫ್ರೆಂಡ್ಸ್ ಟೈಗರ್ಸ್ ಬೆಳ್ಳಾರೆ ಇವರಿಂದ ೯ ನೇ ವರ್ಷದ “ಹುಲಿವೇಷ ಕುಣಿತ” ಶ್ರೀ ಗೋಪಾಲಕೃಷ್ಣ ಗೊಂಬೆ ಬಳಗ,ಸ್ನೇಹಾಂಜಲಿ ಕುಣಿತ ಭಜನಾ ತಂಡ ಬೆಳ್ಳಾರೆ ಇವರಿಂದ ವಿವಿಧ ಆಕರ್ಷಣೀಯ ನೃತ್ಯ ಗಳೊಂದಿಗೆ ಬ್ಯಾಂಡ್ ವಾದ್ಯಗಳೊಂದಿಗೆ ವೈಭವದ ಶೋಭಾಯಾತ್ರೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ ಗಂಟೆ ೬.೩೦ ರಿಂದ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ “ಸಂಗೀತ ಗಾನ ಸಂಭ್ರಮ” ನಡೆಯಲಿದೆ.










