ಪಂಚಸಪ್ತತಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ

0

ಇಂಪಾರ್ಟೆಂಟ್ ಎಫ್‌ಸಿ ವತಿಯಿಂದ ಗುತ್ತಿಗಾರು ವತಿಯಿಂದ “ಪಂಚಸಪ್ತತಿ ಸ್ವಚ್ಛತಾ ಕಾರ್ಯಕ್ರಮ”ಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಐಎಫ್‌ಸಿ ಪ್ರಧಾನ ಕಾರ್ಯದರ್ಶಿ ಆಶ್ಲೇಷ್ ಕೆಡಿ ಅವರು ಉದ್ಘಾಟಿಸಿದರು.

ಐಎಫ್‌ಸಿ ಅಧ್ಯಕ್ಷ ಮುಳಿಯ ಸಾತ್ವಿಕ್ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರು ಕೌಶಿಕ್ ಶ್ಯಾಮ್ ಮತ್ತು ಶ್ರಿಶರಣ್ ಮೊಗ್ರ, ಮೋನಿಶ್ ಬಾಕಿಲಾ, ಕಾರ್ಯದರ್ಶಿಗಳು ಕಿರಣ್ ವಲಲಂಬೆ, ನಿರ್ದೇಶಕರು ಅಮಿತ್ ನಾಯಕ್ ಹಾಗೂ ಸದಸ್ಯರು ವೃಶಾಂಕ, ನಂದನ್ ಪವಿತ್ರಮಜಲು ಮತ್ತು ಚಂದ್ರಶೇಖರ ಕಡೋಡಿ ಉಪಸ್ಥಿತರಿದ್ದರು.

ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆ ಕುರಿತ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಯಿತು. ಪಂಚಸಪ್ತತಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಮುಂದಿನ 75 ದಿನಗಳ ಕಾಲ ವಿವಿಧ ಸ್ವಚ್ಛತಾ ಹಾಗೂ ಜಾಗೃತಿ ಕಾರ್ಯಕ್ರಮಗಳು ನಡೆಯಲಿದೆ.