ಪಂಚಸಪ್ತತಿ ಸ್ವಚ್ಚತಾ ಅಭಿಯಾನ ಅತ್ಯುತ್ತಮ ಕಾರ್ಯ : ಶಾಸಕಿ ಭಾಗೀರಥಿ ಮುರುಳ್ಯ ಮೆಚ್ಚುಗೆ

0

ಪಂಚಸಪ್ತತಿ ರಸಪ್ರಶ್ನೆ ಅದೃಷ್ಟಶಾಲಿಗಳ ಆಯ್ಕೆ ನಡೆಸಿದ ಶಾಸಕರು

ಸುಲ್ಯದ ಯುವಜನ ಸಂಯುಕ್ತ ಮಂಡಳಿ , ಪ್ರತಾಪ ಯುವಕ ಮಂಡಲ ಅಜ್ಜಾವರ, ಚೈತ್ರ ಯುವತಿ ಮಂಡಲ ಅಜ್ಜಾವರ ಇದರ ಸಹಯೋಗದಲ್ಲಿ ಪಂಚಸಪ್ತತಿ ಸ್ವಚ್ಛತಾ ಅಭಿಮಾನ-2025 – 75 ದಿನಗಳ ಸ್ವಚ್ಛತಾ ಅಭಿಯಾನದ ಪ್ರಯುಕ್ತ ನಡೆದ ರಸಪ್ರಶ್ನೆ ಕಾರ್ಯಕ್ರಮವು ಶಾಸಕರ ನಿಲಯದಲ್ಲಿ ಮೊದಲ ಹತ್ತು ದಿನದ ವಿಜೇತರ ಆಯ್ಕೆ ಅ.21ರಂದು ನಡೆಯಿತು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ವಿಜೇತರ ಆಯ್ಕೆ ನಡೆಸಿಕೊಟ್ಟರು. ಬಳಿಕ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು “ಪಂಚಸಪ್ತತಿ ಸ್ವಚ್ಚತಾ ಅಭಿಯಾನ ಅತ್ಯುತ್ತಮ ‌ಕಾರ್ಯ.‌ ಇದು ನಿರಂತರವಾಗಿ ನಡೆಯಲಿ.‌ ಎಲ್ಲರೂ ಇದರಲ್ಲಿ ಭಾಗವಹಿಸಬೇಕು” ಎಂದು ಹೇಳಿದರು.

ಶ್ರೀಮತಿ ರಾಜೀವಿ ಅಡ್ಪ್ಪoಗಾಯ ಹಾಗೂ ಶ್ರೀಮತಿ ಮಮತಾ ರೈ,ಮೇನಾಲ ರಸಪ್ರಶ್ನೆ ಕಾರ್ಯಕ್ರಮ ಸ್ಪರ್ಧೆಯ ಅದೃಷ್ಟಶಾಲಿಗಳಾಗಿ ಆಯ್ಕೆಗೊಂಡರು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚನಿಯ ಕಲ್ತಡ್ಕ, ಮುರುಳ್ಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜಾನಕಿ, ಯುವಜನ ಸoಯುಕ್ತ ಮಂಡಳಿ ಸುಳ್ಯ ನಿರ್ದೇಶಕರುಗಳಾದ ಗುರುರಾಜ್ ಅಜ್ಜಾವರ, ಪ್ರಸಾದ್ ಕಾಟೂರು, ಮುರುಳ್ಯ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ವಸಂತ್ ನಡುಬೈಲು, ಶಾಸಕರ ಆಪ್ತ ಕಾರ್ಯದರ್ಶಿ ಹರೀಶ್,ಪ್ರತಾಪ ಯುವಕ ಮಂಡಲದ ಕಾರ್ಯದರ್ಶಿ ನವೀನ್ ಕುಮಾರ್, ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್, ಸದಸ್ಯರಾದ ಶ್ರೀಮತಿ ಚಂದ್ರವತಿ, ಕು. ವಂಶಿಕಾ ಉಪಸ್ಥಿತರಿದ್ದರು.