ಸುಳ್ಯದ ಸೈಂಟ್ ಜೋಸೆಫ್ ಶಾಲೆಗೆ ಸುಳ್ಯ ಹೋಬಳಿ ಮಟ್ಟದ ಸಮಗ್ರ ಪ್ರಶಸ್ತಿ

0

ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ ಹಾಗೂ ಗ್ರೀನ್ ವ್ಯೂ ವಿದ್ಯಾ ಸಂಸ್ಥೆಗಳು ಸುಳ್ಯದ ಆಶ್ರಯದಲ್ಲಿ ಅ. 24 ಮತ್ತು 25 ರಂದು
ಮಹಾತ್ಮಾ ಗಾಂಧಿ ಮಲ್ನಾಡು ವಿದ್ಯಾ ಸಂಸ್ಥೆ ಕೊಡಿಯಾಲಬೈಲ್ ನಲ್ಲಿ ನಡೆದ ಸುಳ್ಯ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ 17ರ ವಯೋಮಾನದ ಬಾಲಕಿಯರ ತಂಡ ಪ್ರಶಸ್ತಿ ಹಾಗೂ ಶಾಲಾ ಸಮಗ್ರ ಪ್ರಶಸ್ತಿ ಗಳಿಸಿಕೊಂಡಿರುತ್ತದೆ. ಚಿನ್ಮಯಿ ಶೆಟ್ಟಿ, ಧನ್ವಿ.ಕೆ 10ನೇ, ವಮಿಕ ರೈ 9ನೇ ಇವರು ವೈಯಕ್ತಿಕ ಬಹುಮಾನಗಳನ್ನು ಪಡೆದರು. ವಿದ್ಯಾಸಂಸ್ಥೆಯ ಜೊತೆ ಕಾರ್ಯದರ್ಶಿ ಓಲ್ವಿನ್ ಎಡ್ವರ್ಡ್ ಡಿ ಕುನ್ಹ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ಇವರ ಮಾರ್ಗದರ್ಶನದಲ್ಲಿ , ದೈಹಿಕ ಶಿಕ್ಷಣ ಶಿಕ್ಷಕರಾದ , ಕೊರಗಪ್ಪ ಬೆಳ್ಳಾರೆ, ಪುಷ್ಪವೇಣಿ ಹುದೇರಿ ಸಹಶಿಕ್ಷಕಿಯರಾದ ರೀಟಲತಾ ಡಿ’ಸಿಲ್ವ, ದೇವಿಲತಾ ತಂಡದ ವ್ಯವಸ್ಥಾಪಕರಾಗಿ ಸಹಕರಿಸಿದರು.