ಸುಳ್ಯ : ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಕ್ಯಾಂಪ್ ಮತ್ತು ನಶಾ ಮುಕ್ತ ಪ್ರತಿಜ್ಞೆ

0

ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆ ಯಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಕ್ಯಾಂಪ್ ಮತ್ತು ನಶಾ ಮುಕ್ತ ಪ್ರತಿಜ್ಞೆ, ಆರೋಗ್ಯ ಇಲಾಖೆ ಮತ್ತು ವಿಕಲಚೇತನರ ಇಲಾಖೆಯಿಂದ ಜಂಟಿಯಾಗಿ ಅ. 28 ರಂದು ನಡೆಯಿತು.

ಈ ವೇಳೆ ತಾಲೂಕು ಸಮುದಾಯ ಆಸ್ಪತ್ರೆಯ ವ್ಯೆದ್ಯಾಧಿಕಾರಿ ಡಾ. ನವೀನ್, ತಾಲೂಕು ಪಂಚಾಯತ್ ನ ವಿಕಲಚೇತನರ ಇಲಾಖೆಯ
ಎಂ ಆರ್ ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಯುಆರ್ ಡಬ್ಲ್ಯೂ ಪ್ರವೀಣ್ ನಾಯಕ್, ಇತರ ಪಂಚಾಯತ್ ಗಳ ವಿ ಆರ್ ಡಬ್ಲ್ಯೂ ರವರಾದ ಪುಷ್ಪ ಶ್ರೀ, ಲಿಖಿತ, ಭವ್ಯ, ಪುಟ್ಟಣ್ಣ ವಿ, ಮೇಘ ಶ್ರೀ, ಉಮ್ಮರ್ ಕೃಷ್ಣ ಪ್ರಸಾದ್, ಆಶೀಶ್, ಹರ್ಷಿತ್, ರಂಜನ್, ಸದಾನಂದ, ವೆಂಕಟ್ರಮಣ, ಉಮಾವತಿ ಮತ್ತು ದಾದಿ ನಯನ ಮತ್ತು ಇತರ ಸಿಬ್ಬಂದಿಗಳು ಮತ್ತು ಸಾರ್ವಜನಿಕ ರು, ವಿಶೇಷ ಚೇತನರು ಭಾಗವಹಿಸಿ ದ್ದರು.