
ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರತಿ ಮುರುಳ್ಯ ಅವರು ಇಂದು ಎಡಮಂಗಲದಲ್ಲಿ ನಡೆದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಜೀವೇಂದ್ರ ಎಡಮಂಗಲ ಅವರು ಎಡಮಂಗಲ ರೈಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಸೌಲಭ್ಯ ನೀಡುವಂತೆ ಸಂಸದರನ್ನು ಒತ್ತಾಯಿಸಲು ಶಾಸಕರಿಗೆ ಮನವಿ ಸಲ್ಲಿಸಿದರು.









ಎಡಮಂಗಲ ಪ್ರದೇಶದ ಜನತೆಗೆ ರೈಲು ಪ್ರಯಾಣದ ಅನುಕೂಲತೆ ಹೆಚ್ಚಿಸಲು ಈ ನಿಲುಗಡೆ ಅತ್ಯಂತ ಅಗತ್ಯ ಎಂದು ಜೀವೇಂದ್ರ ಅಭಿಪ್ರಾಯಪಟ್ಟರು. ಸ್ಥಳೀಯರು ಈ ಮನವಿಗೆ ಬೆಂಬಲ ವ್ಯಕ್ತಪಡಿಸಿದ್ದು, ಶೀಘ್ರದಲ್ಲೇ ರೈಲ್ವೆ ಇಲಾಖೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.










