ಮಹಿಳೆಯಿಂದ ಸುಳ್ಯ ಠಾಣೆಯಲ್ಲಿ ದೂರು
ಸುಳ್ಯ ಶ್ರೀರಾಮ್ ಪೇಟೆ, ದುಬೈ ಬಜಾರ್ ಅಂಗಡಿಗೆ ಗ್ರಾಹಕರಾಗಿ ಬಂದಿದ್ದ ಇಬ್ಬರು ಅಂಗಡಿಯ ಟೇಬಲ್ ನಲ್ಲಿ ಇರಿಸಿದ್ದ ಸಿಬ್ಬಂದಿಯ ಪರ್ಸನ್ನು ಕಳ್ಳತನ ಮಾಡಿ ಹೋಗಿರುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಕಳ್ಳತನವಾಗಿರುವ ಪರ್ಸ್ ಜಯನಗರ ನಿವಾಸಿ ಶ್ರೀಮತಿ ಪ್ರಿಯಾ ಎಂಬುವವರದಾಗಿದ್ದು ಅವರು ದುಬೈ ಬಜಾರ್ ನಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಾರೆ.
ಅವರು ತಮ್ಮ ಬ್ಯಾಗನ್ನು ಅಂಗಡಿಯಲ್ಲಿ ಅವರು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಗ್ರಾಹಕರು ಅಂಗಡಿಗೆ ಬಂದು ಐಟಂ ಖರೀದಿ ಮಾಡಿ ಹೋಗುವ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲಿ ಇರಿಸಿದ್ದ ಇವರ ಬ್ಯಾಗನ್ನು ತೆಗೆದುಕೊಂಡು ಹೋಗಿರುತ್ತಾರೆ. ಬ್ಯಾಗಿನಲ್ಲಿ ಸುಮಾರು 5 ಸಾವಿರ ಮೊತ್ತ ಹಣ ಹಾಗೂ 2 ಎಟಿಎಂ ಕಾರ್ಡ್ ಇದ್ದು ಈ ಬಗ್ಗೆ ಅವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.















ಸುದ್ದಿಯೊಂದಿಗೆ ಮಾತನಾಡಿರುವ ಪ್ರಿಯಾ ರವರು ಗ್ರಾಹಕರ ಗೋಜಿನಲ್ಲಿ ಬಂದವರು ಓರ್ವ ಪುರುಷ ಹಾಗೂ ಓರ್ವ ಮಹಿಳೆ ಇದ್ದು ಅವರು ಸ್ಕೂಟಿ ವಾಹನದಲ್ಲಿ ಬಂದಿದ್ದರು. ಮಡಿಕೇರಿ ಭಾಗದವರು ಎಂದು ಮಾತನಾಡುವ ಸಂದರ್ಭದಲ್ಲಿ ಹೇಳಿದ್ದರು.
ಅಂಗಡಿಯ ಸಿಸಿಟಿವಿಯಲ್ಲಿ ಅವರು ಬ್ಯಾಗ್ ಕೊಂಡು ಹೋಗುವ ದೃಶ್ಯ ಕಂಡುಬಂದಿದೆ. ಆದರೆ ಅವರು ಹೋಗುವ ಸ್ಕೂಟರ್ನ ನಂಬರ್ ಸರಿಯಾಗಿ ಕಾಣಿಸದೆ ಇರುವ ಕಾರಣ ಅವರು ಯಾರು ಎಂಬುವುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಸುಳ್ಯ ಪೊಲೀಸರು ಪತ್ತೆ ಹಚ್ಚುವ ಬಗ್ಗೆ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.










