ಅಡ್ಪಂಗಾಯ ಸ ಹಿ ಪ್ರಾ ಶಾಲೆಯಲ್ಲಿ ಮಕ್ಕಳ ದಿನಾಚರಣೆ

0

ಅಡ್ಬಂಪಗಾಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.14 ರಂದು ಪೋಷಕ – ಶಿಕ್ಷಕರ ಮಹಾಸಭೆ ಮತ್ತು ಮಕ್ಕಳ ದಿನಾಚರಣೆ ನಡೆಯಿತು.

ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ತರಗತಿವಾರು ಆಟದ ಸ್ಪರ್ಧೆಗಳು ತದ ನಂತರ ಸಭಾಕಾರ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಬ್ಬಾಸ್ ಎ. ಬಿ ಇವರು ವಹಿಸಿದರು.ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವಿನೋದ್,ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ರಂಮ್ಲ, ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ನರ್ಮದಾ, ಶಾಲಾ ನಾಯಕ ನೌಷದ್, ಉಪನಾಯಕ ಫಹೀಮ್ ಉಪಸ್ಥಿತರಿದ್ದರು.
ಅಧ್ಯಕ್ಷರು ಮಾತನಾಡಿ ಶುಭ ಹಾರೈಸಿಸಿದರು.


ಮಕ್ಕಳ ದಿನಾಚರಣೆಯ ಮಹತ್ವವನ್ನು ಬಗ್ಗೆ ಶಾಲಾ ಉಪನಾಯಕ ಹಾಗೂ ವಿದ್ಯಾರ್ಥಿಗಳಾದ ಸಾತ್ವಿ ಅಸೂರರವರು ವಿವರಿಸಿದರು.

ಶಿಕ್ಷಕರಾದ ಶ್ರೀಮತಿ ನರ್ಮದಾ ಸಭೆಯ ಉದ್ದೇಶ ಹಾಗೂ ಪೋಷಕರಿಗೆ ಸೂಚನೆ ಗಳನ್ನು ನೀಡಿದರು.ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ವಿದ್ಯಾರ್ಥಿಗಳಾದ ಫರಹ ಸ್ವಾಗತಿಸಿ ಲತಿಕ ವಂದಿಸಿ ಆಸಿಫ ಹಾಗೂ ರಹೀಬ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆದು
ಬಹುಮಾನದ ಪ್ರಯೋಜಕರಾಗಿ
ಅಧ್ಯಕ್ಷರಾದ ಅಬ್ಬಾಸ್ ಎ. ಬಿ ಸ್ಥಳೀಯರು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್ರೀಮತಿ ಲೀಲಾ ಮನಮೋಹನ್, ಹಾಗೂ
ರವೀಶ್ ಮಾವಿನಪಲ್ಲ ರವರು ನೀಡಿ ಸಹಕರಿಸಿದರು.