ಪೆರುವಾಜೆ ಸ.ಹಿ.ಪ್ರಾ.ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಬೆಂಕಿ ರಹಿತ ಅಡುಗೆ

0

ಶುಚಿ,ರುಚಿಯಾದ ಹಲವು ಬಗೆಯ ಆಹಾರ ಪದಾರ್ಥಗಳ ತಯಾರಿ – ಪ್ರದರ್ಶನ

ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಬೆಂಕಿ ರಹಿತ ಅಡುಗೆ ತಯಾರಿ ಮಾಡಿ ಪ್ರದರ್ಶನ ನ.17 ರಂದು ನಡೆಯಿತು.
ವಿದ್ಯಾರ್ಥಿಗಳು ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿ ಮಾಡಿ ಶಾಲೆಯ ಎದುರು ಜಗಲಿಯಲ್ಲಿ ಬೆಂಚುಗಳಲ್ಲಿ ಪ್ರದರ್ಶನಕ್ಕೆ ಇರಿಸಿದ್ದರು.
ತರಕಾರಿ ಸಲಾಡ್, ಹಣ್ಣಿನ ಸಲಾಡ್, ರಸಾಯನ, ಅವಿಲ್ ಮಿಲ್ಕ್, ಕಲ್ಲಂಗಡಿ, ಪನರ್ಪುಳಿ, ಪಿಸ್ತಾ, ನಿಂಬೆ ಜ್ಯೂಸ್, ಚುರುಮುರಿ, ಕೇಕ್, ಮಸಾಲ ಅನನಾಸು, ಸೌತೆ, , ಚಾಟ್ ಕಾರ್ನ್, ಕಚಂಬರ್, ಚಟ್ ಪಟ್ ಲೇಸ್, ಮಸಾಲ ಅವಲಕ್ಕಿ ಹಾಗೂ ಇನ್ನಿತರ ಐಟಂಗಳನ್ನು ತಯಾರಿಸಿದ್ದರು.


ತಾವು ಮಾಡಿದ ಆಹಾರಗಳನ್ನು ಅಲ್ಲಿಗೆ ಬಂದವರಿಗೆ ನೀಡುತ್ತಿದ್ದರು.
ರುಚಿಯನ್ನು ಸವಿದ ಜನರು ಮಕ್ಕಳಿಗೆ ಪ್ರೋತ್ಸಾಹಿಸಿ ಬೆಂಬಲಿಸಿದರು. ಮಕ್ಕಳು ಖುಷಿ ಖುಷಿಯಿಂದ ಆಹಾರ ಪದಾರ್ಥಗಳನ್ನು ಬಡಿಸತೊಡಗಿದರು.
ವಿವಿಧ ರೀತಿಯ ತಿನಿಸುಗಳು ಅತ್ಯಂತ ರುಚಿಕರವಾಗಿತ್ತು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ ತಾವು ಕೂಡ ಆಹಾರ ಪದಾರ್ಥಗಳ ರುಚಿಯನ್ನು ಸವಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರುತಿ,ಶಿಕ್ಷಕಿಯರಾದ ಶ್ರೀಮತಿ ರತ್ನಾವತಿ,ಶ್ರೀಮತಿ ರೇವತಿ ಡಿ., ಶಿಕ್ಷಕ ಯಶೋಧರ ರವರು ಸಹಕಾರ ನೀಡಿದರು.