









ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಮತ್ತು ಚಿಗುರು ಗೆಳಯರ ಬಳಗ (ರಿ) ಪಂಬೆತ್ತಾಡಿ ಇದರ ವತಿಯಿಂದ ಪಂಚಸಪ್ತತಿ-2025 , 75 ದಿನಗಳ ಸ್ವಚ್ಛತಾ ಅಭಿಯಾನದ 3ನೇ ಕಾರ್ಯಕ್ರಮವನ್ನುನ. 17 ರಂದು ಕರಿಕ್ಕಳದಿಂದ ನಿಂತಿಕಲ್ಲುವರೆಗೆ ರಸ್ತೆಯ ಸೂಚನಾ ಫಲಕ ಮತ್ತು ಮೈಲಿಗಲ್ಲು ಸ್ವಚ್ಛತೆ ಮಾಡುವ ಮೂಲಕ ಸ್ವಚ್ಛತಾ ಅಭಿಯಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಚಿಗುರು ಗೆಳೆಯರ ಬಳಗದ ಅಧ್ಯಕ್ಷ ಅಶ್ವತ್ ಬಾಬ್ಲುಬೆಟ್ಟು, ಸ್ಥಾಪಕದ್ಯಕ್ಷ ಶ್ರೀನಿವಾಸ್ ಬಿ ಹಾಗೂ ಚಿಗುರು ಗೆಳೆಯರ ಬಳಗದ ಸದಸ್ಯರು ಭಾಗವಸಿದ್ದರು










