ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಸಿಬ್ಬಂದಿ ಜತ್ತಪ್ಪ ಕೆ.ಪಡ್ಪುರವರಿಗೆ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ

0

ಉತ್ತಮ ಕಾರ್ಯ ವೈಖರಿಯಿಂದ ನಗುಮುಖದ ಸೇವೆ ನೀಡಿದವರು – ಆರ್ .ಕೆ.ಭಟ್ ಕುರುಂಬುಡೇಲು

ಇತ್ತೀಚೆಗೆ ನಿಧನರಾದ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಉದ್ಯೋಗಿ ಜತ್ತಪ್ಪ ಕೆ.ಪಡ್ಪು ರವರಿಗೆ ಬೆಳ್ಳಾರೆ ಸಹಕಾರಿ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆಯು ನ.24 ರಂದು ಸಂಘದ ಸಭಾಭವನದಲ್ಲಿ ನಡೆಯಿತು.


ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರಿ ಸಂಘದಲ್ಲಿ ಜತ್ತಪ್ಪಣ್ಣನರವರು 32 ವರ್ಷಗಳ ಕಾಲ ಸುದೀರ್ಘವಾಗಿ ಸೇವೆ ಸಲ್ಲಿಸಿದ್ದಾರೆ.
ಒಳ್ಳೆಯ ವ್ಯಕ್ತಿತ್ವದಿಂದ ಜನರಿಗೆ ಉತ್ತಮ‌ ಸರ್ವಿಸ್ ನೀಡಿದ್ದಾರೆ.


ಇವರ ಮಾತು ಕಡಿಮೆ ಕೆಲಸ ಜಾಸ್ತಿ. ಸಹಕಾರಿ ಸಂಘವನ್ನು ತನ್ನ ಸಂಸ್ಥೆ ಎಂದು ತಿಳಿದು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ.ಇವರ ಕಾರ್ಯ ವೈಖರಿ ಇತರರಿಗೆ ಪ್ರೇರಣೆಯಾಗಲಿ ಎಂದು ಹೇಳಿ ನುಡಿನಮನ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿಯವರು ಮಾತನಾಡಿ ಜತ್ತಪ್ಪಣ್ಣನವರು ನಗುಮಖದಿಂದ ಸೇವೆ ನೀಡಿದ್ದಾರೆ.
ಸಹಕಾರಿ ಸಂಘವನ್ನು ತನ್ನ ಮನೆಯಂತೆ ಬಾವಿಸಿ ಕೆಲಸ ಮಾಡಿದವರು ಎಂದು ಹೇಳಿ ಅವರ ಕೆಲಸ ಕಾರ್ಯವನ್ನು ನೆನಪಿಸಿಕೊಂಡರು.


ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸುನಂದ ಐ.ಆಳ್ವ, ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಬ್ಬಣ್ಣ ರೈ,ನಿರ್ದೇಶಕರಾದ ಐತ್ತಪ್ಪ ರೈ,ಭಾಸ್ಕರ ಚಾವಡಿಬಾಗಿಲು,ಕರುಣಾಕರ ಆಳ್ವ,ಶ್ರೀಮತಿ ಭಾರತಿ ಕಲ್ಲೋಣಿ, ನಾರಾಯಣ ಕೊಂಡೆಪ್ಪಾಡಿ ,ಸಂಘದ ಸಿಬ್ಬಂದಿ ವೇದಿತ್ ರೈ ನುಡಿನಮನ ಸಲ್ಲಿಸಿದರು.
ಜತ್ತಪ್ಪ ಕೆ.ಯವರ ಪತ್ನಿ ಶ್ರೀಮತಿ ಲಲಿತಾ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಗಮಿಸಿದ ಗಣ್ಯರು ದಿ.ಜತ್ತಪ್ಪ ಪಡ್ಪುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.