ಸಂವಿಧಾನದ ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯ: ನ್ಯಾಯಾಧೀಶೆ ಕು. ಅರ್ಪಿತಾ

ತಾಲೂಕು ಕಾನೂನು ಸೇವೆಗಳ ಸಮಿತಿ, ಸುಳ್ಯ,ವಕೀಲರ ಸಂಘ, ಸುಳ್ಯ, ಕರ್ನಾಟಕ ಪಬ್ಲಿಕ್ ಸ್ಕೂಲ್, ಗಾಂಧಿನಗರ ಸುಳ್ಯ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆ ಕೆಪಿಎಸ್ ಸಭಾಂಗಣದಲ್ಲಿ ನಡೆಯಿತು.
ಸುಳ್ಯ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಕುಮಾರಿ ಅರ್ಪಿತಾ ರವರು ಸಂವಿಧಾನ ಪೀಠಿಕೆಯನ್ನು ಆಚರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂವಿಧಾನವು ದೇಶದ ಭದ್ರತೆಯ ಬುನಾದಿಯಾಗಿದೆ. ಅದರ ರಕ್ಷಣೆ ಹಾಗೂ ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕು ಮತ್ತು ಅದರ ಅನುಗುಣವಾಗಿ ಜೀವನ ನಿರ್ವಹಿಸಬೇಕು ಎಂದು ಹೇಳಿದರು.
















ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಯವರು ಮಾತನಾಡಿ ಶಾಲಾ ಪಠ್ಯ ಪುಸ್ತಕದಲ್ಲಿ ಇರುವಂತೆ ರಾಜರ ಕಾಲದಲ್ಲಿ ನಮ್ಮ ದೇಶದ ಆಡಳಿತ ಅಂದಿನ ರಾಜರುಗಳು ಹೇಳಿದಂತೆ ನಡೆಯುತ್ತಿತ್ತು.ಪ್ರಜೆಗಳು ಅದನ್ನು ಪಾಲಿಸುತ್ತಿದ್ದರು.ಅದು ಅಂದು ಅನಿವಾರ್ಯವಾಗಿತ್ತು.ಆದರೆ ದೇಶಕ್ಕೆ ಸಂವಿಧಾನ ಬಂದ ಬಳಿಕ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ಮತ್ತು ಅವರ ರಕ್ಷಣೆ ಸಂವಿಧಾನದಿಂದ ದೊರಕಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸುಳ್ಯ ನ್ಯಾಯಾಲಯದ ವಕೀಲರಾದ ಕು: ಲಿಖಿತ ಕೆ ಬಿ ರವರು ಸಂವಿಧಾನ ದಿನದ ಮಹತ್ವದ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸಹಾಯಕ ಸರ್ಕಾರಿ ಅಭಿಯೋಜಕರು ಕು.ಪ್ರೀತಿ ಎಂ ಸಿ, ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪರಮೇಶ್ವರಿ ಎಚ್. ಆರ್.,ಉಪ ಪ್ರಾಂಶುಪಾಲರಾದ ಶ್ರೀಮತಿ. ಜ್ಯೋತಿಲಕ್ಷ್ಮೀ. ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಳ್ಯ ನ್ಯಾಯಾಲಯದ ವಕೀಲರುಗಳು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಜ್ಞಾನ ಶಿಕ್ಷಕರಾದ ಇಬ್ರಾಹಿಂ ರವರು ಸ್ವಾಗತಿಸಿ ಶಿಕ್ಷಕಿ ಯಮುನಾ ಕಾರ್ಯಕ್ರಮ ನಿರೂಪಿಸಿ ನ್ಯಾಯವಾದಿ ಚಂದ್ರಶೇಖರ್ ವಂದಿಸಿದರು.










