ಸುಳ್ಯ : ಶಾಂಭವ ಸದನ ವಸತಿ ಗೃಹಗಳ ಉದ್ಘಾಟನೆ

0

ಸುಳ್ಯದ ರಾಮ ಬಾರ್ ಹತ್ತಿರ ದೇವಸ್ಯದಲ್ಲಿ ಸುಳ್ಯದ ವಿಶ್ವ ಕಾಂಪ್ಲೆಕ್ಸ್ ನಲ್ಲಿರುವ ದೀಕ್ಷಾ ಟ್ರೇಡರ್ಸ್ ಮಾಲಕ ಮಾಧವ ರಾವ್ ಮತ್ತು ಶ್ರೀಮತಿ ಬಬಿತಾ ಮಾಧವ ರಾವ್ ರವರು ನೂತನವಾಗಿ ನಿರ್ಮಿಸಿದ ಶಾಂಭವ ಸದನ ವಸತಿ ಗೃಹಗಳ ಉದ್ಘಾಟನೆಯು ನ.28 ರಂದು ನಡೆಯಿತು. ಬೆಳಿಗ್ಗೆ ಗಣಹೋಮ,ಸತ್ಯನಾರಾಯಣ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಹಲವು ಜನ ಬಂಧುಗಳು ಹಾಗೂ ಗಣ್ಯರು ಉಪಸ್ಥಿತರಿದ್ದು ಶುಭಹಾರೈಸಿದರು.