ದಿ. ದಯಾನಂದ ಕಡಪಳರವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ

0

ಇತ್ತೀಚಿಗೆ ನಿಧನರಾದ ಜಾಲ್ಸೂರು ಗ್ರಾಮದ ಬೊಳುಬೈಲು ನಿವಾಸಿ ದಯಾನಂದ ಕಡಪಳರವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ನ. 28 ರಂದು ಸುಳ್ಯದ ಕೆವಿಜಿ ಅಮರಶ್ರೀ ಸಮುದಾಯ ಸಭಾಭವನದಲ್ಲಿ ನಡೆಯಿತು.

ಸಾಮಾಜಿಕ ಧುರೀಣ ಎಂ.ಬಿ ಸದಾಶಿವರವರು ಮೃತರ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಯಾನಂದ ಕಡಪಳರವರ ತಾಯಿ ಶ್ರೀಮತಿ ಕೆ.ಎಲ್ ಪಾರ್ವತಿ, ಪತ್ನಿ ಶ್ರೀಮತಿ ಭುವನೇಶ್ವರಿ, ಪುತ್ರಿಯರಾದ ಶ್ರೀಮತಿ ವೃಂದಾ, ಶ್ರೀಮತಿ ಸ್ಪಂದ, ಅಳಿಯಂದಿರಾದ ಘನಶ್ಯಾಮ್, ಕಾರ್ತಿಕ್, ಸಹೋದರರಾದ ಲೋಕನಾಥ, ವಾಸುದೇವ, ಗಣೇಶ, ಸಹೋದರಿ ಶ್ರೀಮತಿ ನಳಿನಿ, ರಾಜಮ್ಮ, ಬಂಧುಮಿತ್ರರು, ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ರಾಮಣ್ಣ ಕೊಂಡೆಬಾಯಿ ಕಾರ್ಯಕ್ರಮ ನಿರ್ವಹಿಸಿದರು.