ಸುಳ್ಯದ ಕೇಶವ ಕೃಪಾ ವೇದ ಪಾಠ ಶಾಲೆಯ ಸಂಚಾಲಕರು, ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿಗೆ ಭಾಜನರಾದ ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ ಭಟ್ ರವರನ್ನು ಅಡ್ಕಾರಿನ ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನದಲ್ಲಿ ಡಿ. 6ರಂದು ಗೌರವಿಸಿ ಸನ್ಮಾನಿಸಲಾಯಿತು.








ಯುವ ಉದ್ಯಮಿ ಹೋಟೆಲ್ ಕರಾವಳಿ ಇದರ ಮಾಲಕರಾದ ರವಿಪ್ರಕಾಶ್ ಕಲ್ಲುಮುಟ್ಲು, ಯಕ್ಷಗಾನ ಕಲಾವಿದ ಶೇಖರ ಮಣಿ ಯಾಣಿ ಹಾಗೂ ಅವರ ಮನೆಯವರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಶಿವರಾಮ ರೈ ಮತ್ತು ವಿವೇಕ್ ರೈ ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.










