ಮಂಗಳೂರು ಆಸ್ಪತ್ರೆಗೆ ದಾಖಲು
ಪಂಜದಲ್ಲಿ ನಡೆದ ಘಟನೆ
ಅರ್ಚಕರೊಬ್ಬರ ವಾಹನಕ್ಕೆ ಕಾಡುಪ್ರಾಣಿಯೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಡಿ.೧೨ ರ ಮುಂಜಾನೆ ಪಂಜದಲ್ಲಿ ನಡೆದಿದೆ.









ಗಾಯಾಳು ಪಂಜ ಗ್ರಾಮದ ವಾಸು ಭಟ್ ಎಂದು ಗುರುತಿಸಲಾಗಿದೆ.
ಬಳ್ಪ ಸಮೀಪದ ಎಡೋಣಿ ಬೆಳಗಿನ ಸುಮಾರು ನಾಲ್ಕರಿಂದ ಐದು ಗಂಟೆಯ ವೇಳೆ ಪಂಜದ ತನ್ನ ಮನೆಯಿಂದ ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲಿ ಸರ್ಪಸಂಸ್ಕಾರ ಪೂಜೆ ಮಾಡಲು ಬರುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕಡವೆಯಂತಿರುವ ಕಾಡು ಪ್ರಾಣಿ ಢಿಕ್ಕಿ ಹೊಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಅಪಘಾತ ಸ್ಥಳದಲ್ಲಿ ಪ್ರಾಣಿಯ ಕೂದಲು ಇದ್ದ ಕುರುಹುಗಳು ಇದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಗಾಯಾಳುವನ್ನು ಸ್ಥಳೀಯರು ತಕ್ಷಣವೇ ಆಂಬುಲೆನ್ಸ್ ಮೂಲಕ ಪುತ್ತೂರು ಖಾಸಗಿ ಆಸ್ಪತ್ರೆಗೆ ಸೇರಿಸಿ ಬಳಿಕ ಹೆಚ್ಚಿನ ತುರ್ತು ಚಿಕಿತ್ಸೆಗೆ ಅವರನ್ನು ಮಂಗಳೂರು ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.










