ದಾಖಲೆ ಮತಗಳ ಅಂತರದಲ್ಲಿ ವಿಜಯಮಾಲೆ ಧರಿಸಿದ ಭಾಗೀರಥಿ ಮುರುಳ್ಯ
ಗೆಲುವಿನ ಅಂತರ 30875 ಮತಗಳು
ರಾಜ್ಯ ವಿಧಾನ ಸಭಾ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯ ದಾಖಲೆ ಮತಗಳ ಅಂತರದಲ್ಲಿ ವಿಜಯಿಯಾಗಿದ್ದಾರೆ.
ಆರಂಭದಿಂದಲ್ಲೇ ಮುನ್ನಡೆಯನ್ನು ಕಾಯ್ದುಕೊಂಡ ಅವರು ಅಂತಿಮವಾಗಿ 30875 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಹಾಲಿ ಶಾಸಕ ಎಸ್.ಅಂಗಾರ ರವರು 26ಸಾವಿರ ಮತಗಳಿಂದ ಗೆದ್ದಿದ್ದರು.
ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ;
ಭಾಗೀರಥಿ ಮುರುಳ್ಯ- (BJP) 93,911
ಜಿ.ಕೃಷ್ಣಪ್ಪ- (Congress) 63,036
ಹೆಚ್.ಎಲ್.ವೆಂಕಟೇಶ್ 1850 (ಜೆಡಿಎಸ್)
ಸುಮನ ಬೆಳ್ಳಾರ್ಕರ್ 1587 (ಆಮ್ ಆದ್ಮಿ )
ಗಣೇಶ್ ಎಂ.299 (ಕರ್ನಾಟಕ ರಾಷ್ಟ್ರ ಸಮಿತಿ)
ರಮೇಶ್ ಬೂಡು 575 (ಉತ್ತಮ ಪ್ರಜಾಕೀಯ)
ಸುಂದರ ಮೇರ 398 (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ)
ಗುರುವಪ್ಪ ಕಲ್ಲುಗುಡ್ಡೆ 513 (ಪಕ್ಷೇತರ ಅಭ್ಯರ್ಥಿ)
ನೋಟಾ- 2562