ಮೇಲ್ಭಾಗದಿಂದ ಕೊಚ್ಚಿ ಬಂದ ಮಣ್ಣಿನಿಂದ ಮುಚ್ಚಿ ಹೋದ ನಾಲೆಗಳು
ಸುಳ್ಯ ಶಾಂತಿನಗರ ಕ್ರೀಡಾಂಗಣದ ಕಾಮಗಾರಿಯ ಆರಂಭದಿಂದಲೇ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆ ಉಂಟು ಮಾಡಿದ್ದ ಮಳೆ ನೀರಿನ ಸಮಸ್ಯೆ ಇದೀಗ ಮತ್ತೆ ಸಂಕಷ್ಟವನ್ನು ತಂದಿದೆ.
ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಕ್ರೀಡಾಂಗಣದ ಮೇಲ್ಭಾಗದಲ್ಲಿದ್ದ ಮಣ್ಣಿನ ರಾಶಿ ಕೊಚ್ಚಿ ಕೆಳಭಾಗಕ್ಕೆ ಬಂದಿದ್ದು ಈ ಮಣ್ಣುಗಳು ಪಕ್ಕದಲ್ಲಿ ಅರಿಯುವ ನಾಲೆಗೆ ತುಂಬಿದ್ದು ಇದೀಗ ನಾಲೆ ಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಒಂದು ವಾರದಿಂದ ಕ್ರೀಡಾಂಗಣದ ಒಂದು ಬದಿಯಲ್ಲಿ ತುಂಬಿದ ಮಣ್ಣನ್ನು ಕುಸಿಯದಂತೆ ನೋಡಿಕೊಳ್ಳಲು ಸ್ಟೆಪ್ ನಿರ್ಮಿಸಲಾಗಿತ್ತು. ಆದರೆ ನಿನ್ನೆ ಸುರಿದ ಭಾರಿ ಮಳೆಗೆ ಆ ಸ್ಟೆಪ್ ಗಳು ಕೂಡ ಜರಿದು ಬಿದ್ದಿದೆ.
ಇದರಿಂದ ಸ್ಥಳೀಯ ಜನತೆಯಲ್ಲಿ ಆತಂಕ ಮನೆ ಮಾಡಿದ್ದು ಇಲ್ಲಿ ತಡೆಗೋಡೆ ನಿರ್ಮಿಸಲುಎಷ್ಟೇ ಬೇಡಿಕೆ ಇಟ್ಟರು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅತ್ತ ಗಮನ ಹರಿಸದೆ ತಮ್ಮದೇ ಆದ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಇದೇ ರೀತಿ ಮಳೆ ಮುಂದುವರಿದಲ್ಲಿ ಇಲ್ಲಿ ವಾಸಿಸಲು ಕಷ್ಟ ಎಂದು ಸ್ಥಳೀಯರು ತಮ್ಮ ಅಹವಾಲುಗಳನ್ನು ತಿಳಿಸಿದ್ದಾರೆ.