ದಿನನಿತ್ಯದ ಕ್ರೀಡಾ ಪಾಲ್ಗೊಳ್ಳುವಿಕೆ ದೈಹಿಕ ಕ್ಷಮತೆ ಗೆ ಅತ್ಯಗತ್ಯ : ಚಂದ್ರಶೇಖರ್ ಶೆಟ್ಟಿ
ಓದಿಗೆ ಬುದ್ದಿವಂತಿಕೆ ಮುಖ್ಯ, ಆದರೆ ಯಶಸ್ವಿ ಕ್ರೀಡಾಪಟುವಿಗೆ ಬುದ್ದಿವಂತಿಕೆ ಜೊತೆಗೆ ದೈಹಿಕ ಸಾಮರ್ಥ್ಯ ಕೂಡ ಅತ್ಯಗತ್ಯ. ದಿನನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಕ್ಷಮತೆಯೊಂದಿಗೆ ನಾವು ಆರೋಗ್ಯವಾಗಿ ಕ್ರಿಯಾಶೀಲವಾಗಿ ಇರಲು ಸಾಧ್ಯ ಎಂದು ಕರ್ನಾಟಕ ಕ್ರೀಡಾಪಟುಗಳ ಸಂಘದ ಮಾಜಿ ಅಧ್ಯಕ್ಷ ಅಂತಾರಾಷ್ಟ್ರೀಯ ಕ್ರೀಡಾಪಟು ಚಂದ್ರಶೇಖರ್ ಶೆಟ್ಟಿ ನಡುಬೆಟ್ಟು ಹೇಳಿದರು.
ಇವರು ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮೇ 18 ಮತ್ತು 19ರಂದು ನಡೆದ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಇವರು ಕ್ರೀಡಾಪಟುಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿ ಕ್ರೀಡೋತ್ಸವಕ್ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಧಾಕೃಷ್ಣ ಮಾಣಿಬೆಟ್ಟು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಮ್. ಎಮ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ನ್ಯಾಕ್ ಸಂಯೋಜಕಿ ಮಮತಾ ಕೆ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ನಾಯಕ ರಜತ್ ಕುಮಾರ್ ಸ್ವಾಗತಿಸಿ, ಸಹ ಕ್ರೀಡಾ ಕಾರ್ಯದರ್ಶಿ ಪ್ರತೀಕ್ಷಾ ಡಿ ಎಸ್ ಪ್ರಮಾಣ ವಚನ ಬೋಧಿಸಿದರು.
ಕ್ರೀಡಾ ಕಾರ್ಯದರ್ಶಿ ವಿಜಯ್ ಧನ್ಯವಾದ ಸಮರ್ಪಿಸಿದರು. ಆಕರ್ಷಕ ಪಥಸಂಚಲನ ಮತ್ತು ವಿವಿಧ ಕ್ರೀಡಾ ಸ್ಪರ್ಧೆಗಳು ಲೆ. ಸೀತಾರಾಮ ಎಂ. ಡಿ ಮತ್ತು ಕಾಲೇಜಿನ ಉಪನ್ಯಾಸಕ ವೃಂದದವರ ನೇತೃತ್ವದಲ್ಲಿ ನಡೆಯಿತು. ಕು. ಕೃತಿಕಾ ಮತ್ತು ಕು. ಕೃತಿ ಪ್ರಾರ್ಥಿಸಿ, ಕು. ಚೈತನ್ಯ ಹಾಗೂ ಕು. ಯಶಿಕಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಎಲ್ಲಾ ಪದಾಧಿಕಾರಿಗಳು ಸಹಕರಿಸಿದರು.