ವಿಶ್ವ ಮುಟ್ಟಿನ ಸುರಕ್ಷಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಮುಟ್ಟಿನ ಕಪ್ ಬಗ್ಗೆ ಮಾಹಿತಿ ಕಾರ್ಯಾಗಾರವು ಕೋಲ್ಚಾರು ಸ.ಉ.ಹಿ.ಪ್ರಾಥಮಿಕ ಶಾಲೆಯಲ್ಲಿ ಮೇ.28 ರಂದು ನಡೆಯಿತು. ಸುಳ್ಯದ ಸ್ತ್ರೀರೋಗ ತಜ್ಞ ವೈದ್ಯರಾಗಿರುವ ಡಾ.ವೀಣಾ ಎನ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಹಿಳೆಯರು, ಯುವತಿಯರು ಹೆಚ್ಚಾಗಿ ಮುಟ್ಟಿನ ಕಪ್ ಬಳಕೆ ಮಾಡುವುದರಿಂದ ಸುರಕ್ಷತೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪರಿಸರದ ಉಳಿವಿಗಾಗಿ ಹಾಗು ಆರ್ಥಿಕ ಮಿತವ್ಯಯ,ಆರಾಮದಾಯಕ ಬಳಕೆಗೆ ಅತ್ಯಂತ ಸುಲಭ ವಿಧಾನವಾಗಿರುವ ಮುಟ್ಟಿನ ಕಪ್ ಉಪಯೋಗಿಸುವುದು ಒಳ್ಳೆಯ ಬೆಳವಣಿಗೆ ಅಲ್ಲದೆ ಮುಟ್ಟಿನ ಕಪ್ ಬಳಕೆಯ ಸಾಧಕ – ಬಾಧಕಗಳು ,ಕಪ್ ಬಳಕೆಯ ವಿಧಾನದ ಬಗ್ಗೆ ತಿಳಿಸಿದರು.
ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಸುದರ್ಶನ ಪಾತಿಕಲ್ಲು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯೆ ಶಂಕರಿ ಕೊಲ್ಲರಮೂಲೆ,ಕೋಲ್ಚಾರು ಶಾಲೆಯದೈಹಿಕ ಶಿಕ್ಷಣ ಶಿಕ್ಷಕಿ ನಾಗವೇಣಿ ಕೊಯಿಂಗಾಜೆ, ಕೋಲ್ಚಾರು ಅಂಗನವಾಡಿ ಕೇಂದ್ರದ ಶಿಕ್ಷಕಿ ರತ್ನಾವತಿ ವಾಲ್ತಾಜೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 73 ಮಂದಿ ಮಹಿಳೆಯರಿಗೆ ಮುಟ್ಟಿನ ಕಪ್ ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮದ ಪ್ರಾಯೋಜಕರಾಗಿ ಆರದಿರಲಿ ಬೆಳಕು ಬೆಂಗಳೂರು, ಅಮೇರಿಕಾದ ಹಿತೈಷಿಗಳು ಸಹಕರಿಸಿದರು. ಕೋಲ್ಚಾರು ಶಾಲೆಯ ಸಹ ಶಿಕ್ಷಕಿ ಜಲಜಾಕ್ಷಿ ಕಾರ್ಯಕ್ರಮದ ಸಂಯೋಜಕರಾಗಿದ್ದರು.