ಜೂ. 11ರಿಂದ 13 ರವರೆಗೆ ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದೊಂದಿಗೆ ಸಂದರ್ಶನ
ನೈಜ ದುರ್ಬಲ ಬುಡಕಟ್ಟು ಜೇನು ಕುರುಬ, ಕೊರಗ ಬುಡಕಟ್ಟು ಜನತೆಗೆ ರಾಷ್ಟ್ರಪತಿಯವರನ್ನು ಭೇಟಿ ಮಾಡುವ ಮತ್ತು ದೆಹಲಿ ಸಂದರ್ಶನ ಕಾರ್ಯಕ್ರಮಕ್ಕೆ ನೆಲ್ಲೂರು ಕೆಮ್ರಾಜೆ ಗ್ರಾಮದ ರಾಮಚಂದ್ರ ನಾರ್ಣಕಜೆ ರವರಿಗೆ ಅವಕಾಶ ಲಭಿಸಿದೆ.
ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬುಡಕಟ್ಟು ಪ್ರತಿನಿಧಿಗಳಿಗೆ ಈ ಅವಕಾಶವಿದ್ದು ಸುಳ್ಯ ತಾಲೂಕು ಕೊರಗ ಸಂಘದ ವತಿಯಿಂದ ರಾಮಚಂದ್ರರವರ ಹೆಸರನ್ನು ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವಕಾಶ ಒದಗಿ ಬಂದಿದೆ ಎನ್ನಲಾಗಿದೆ.
ಜೂನ್ ತಿಂಗಳ 11 ರಿಂದ 13 ರವರೆಗೆ ದೆಹಲಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು ದಕ್ಷಿಣ ಕನ್ನಡ ಜಿಲ್ಲೆಯಿಂದ ನಾಲ್ಕು ಮಂದಿಗೆ ಅವಕಾಶ ಲಭಿಸಿದ್ದು ಅದರಲ್ಲಿ ಓರ್ವವರಾಗಿ ರಾಮಚಂದ್ರ ಅವರು ಆಯ್ಕೆಯಾಗಿದ್ದಾರೆ.
ರಾಮಚಂದ್ರರವರು ಕೂಲಿ ಕಾರ್ಮಿಕರಾಗಿದ್ದು ದಕ್ಷಿಣ ಕನ್ನಡ ಜಿಲ್ಲಾ ಕೊರಗ ಸಂಘಟನೆಯ ಕೋಶಾಧಿಕಾರಿಯಾಗಿ, ಸುಳ್ಯ ತಾಲೂಕು ಸಂಘದ ಸಂಚಾಲಕರಾಗಿ ಸಂಘದಲ್ಲಿ ಗುರುತಿಸಿಕೊಂಡಿದ್ದಾರೆ.