ಮುಸಲ್ಮಾನರ ಪುಣ್ಯಕ್ಷೇತ್ರ ಸೌದಿ ಅರೇಬಿಯಾದ ಮಕ್ಕ ಮತ್ತು ಮದಿನಾ ಇಲ್ಲಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಡೆಯುತ್ತಿರುವ ಹಜ್ ಕರ್ಮವನ್ನು ನಿರ್ವಹಿಸಲು ಇಡೀ ವಿಶ್ವದಿಂದ ಲಕ್ಷಾಂತರ ಜನರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಭಾರತದಿಂದ ಯಾತ್ರೆಗೆ ಕೈಗೊಳ್ಳುವವರು ಎರಡು ತಿಂಗಳು ಮುಂಚಿತವಾಗಿ ಸರ್ಕಾರದ ಅರ್ಜಿ ಸಲ್ಲಿಸಿ ಅದರ ಮೂಲಕ ಆಯ್ಕೆಯಾದವರು ಹಜ್ ಕರ್ಮವನ್ನು ನಿರ್ವಹಿಸಲು ತೆರಳ ಬೇಕಾಗುತ್ತದೆ.
ಈ ಬಾರಿ ಹಜ್ ಕರ್ಮ ನಿರ್ವಹಿಸಿ ಉದ್ಯಮಿ ಕೆಎಂಸಿಸಿ ದ.ಕ ಜಿಲ್ಲಾ ಕೋಶಾಧಿಕಾರಿ ಹಾಜಿ ಇಬ್ರಾಹಿಂ ಕತ್ತಾರ್ ಮಂಡೆಕೋಲು ಅವರ ಧರ್ಮ ಪತ್ನಿ ಸಾರಬಿ,ಮಂಡೆಕೋಲು ಗ್ರಾ.ಪಂ ಮಾಜಿ ಸದಸ್ಯ ಪೊಕರ್ ಕುಂಞಿ ಬಳ್ಳಕಜೆ,ಹಸೈನಾರ್ ಗೊರಡ್ಕ,ಅವರ ಪತ್ನಿ ಅಸ್ಯಮ್ಮ,ಅರಂತೋಡು ನಿವೃತ್ತ ಉಪನ್ಯಾಸಕ ಅಬ್ದುಲ್ಲಾ ಮಾಸ್ಟರ್ ಅವರ ಪತ್ನಿ ಜಮೀಲ ಬೇಗಂ,ಗೂನಡ್ಕ ಅಬ್ದುಲ್ಲಾ ಮುಸ್ಲಿಯಾರ್ ಶೆಟ್ಟಿಯಡ್ಕ,ಯುವ ಉದ್ಯಮಿ ನಾಸೀರ್ ಕಟ್ಟೆಕ್ಕಾರ್,ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಪೈಂಬಚ್ಚಾಲ್,ಅಬ್ಬಾಸ್ ಪೈಂಬಚ್ವಾಲ್,ಸುಳ್ಯ ಹಳೆಗೇಡು ಉದ್ಯಮಿ ಮುಸ್ತಫಾ ಡೆಲ್ಮಾ,ಅವರ ಪತ್ನಿ ಉನೈಸ,ಜಮಾಲುದ್ದೀನ್ ಅಲ್ ಅಮಾನಿ ಪೈಂಬಚ್ಚಾಲ್,ಸಾರಮ್ಮ ಕೂರ,ಯುವ ಉದ್ಯಮಿ ಇಬ್ರಾಹಿಂ ಕುಂಭಕ್ಕೊಡು, ಅವರ ಪತ್ನಿ ಮಿಸ್ರಿಯಾ,ಎಲಿಮಲೆ ಉದ್ಯಮಿ ಸುದ್ದಿ ಪ್ರತಿನಿಧಿ ಹೆಚ್ ಮಹಮ್ಮದ್ ಹರ್ಲಡ್ಕ, ಅವರ ಪತ್ನಿ ಹಾಜಿರಾ,ಅಬ್ದುಲ್ಲಾ ಪಾಜಪಳ್ಳ,ಅವರ ಪತ್ನಿ ಮರಿಯಮ್ಮ,ಇಸಬು ನಿಂತಿಕ್ಕಲ್ಲು,ಝುಬೈದಾ ನಿಂತಿಕ್ಕಲ್ಲು,ಅಹ್ಮದ್ ಇಸ್ಮಾಯಿಲ್ ಅಡಿಮಾರಡ್ಕ ಪೇರಡ್ಕ ,ಕನಕಮಜಲು ಗ್ರಾ.ಪಂ ಸದಸ್ಯ ಉದ್ಯಮಿ ಸುದ್ದಿ ಪ್ರತಿನಿಧಿ ಇಬ್ರಾಹಿಂ ಕಾಶಿಂ ಸೇರಿದಂತೆ 25 ಮಂದಿ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ ಸುಳ್ಯ ಹಜ್ ಯಾತ್ರೆ ಸಂಯೋಜಕ ಹಾಜಿ ಹಸನ್ ಎ ಅರ್ ಟ್ರೇಡರ್ಸ್ ತಿಳಿಸಿದ್ದಾರೆ.