ದಾಸ್ ಕುಡ್ಲ ಇವೆಂಟ್ಸ್ ಹಾಗು ಅರುಣ್ಯ ಪೌಂಢೇಶನ್ ಪ್ರಸ್ತುತಪಡಿಸಿದ ಅಂತರಾಜ್ಯ ಮಟ್ಟದ ಸಿಂಗರ್ ಪ್ರೀಮಿಯಮ್ ಲೀಗ್ ಕರಾವಳಿ ಕೋಯಲ್ ಚಾಂಪಿಯನ್‌ಷಿಪ್ ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ಭಾಗವಹಿಸಿದ ಸುಳ್ಯದ ಅಶ್ವಿಜ್ ಅತ್ರೇಯ ಹಾಡಿ ತೀರ್ಪುಗಾರರಿಂದ ಶಹಬ್ಬಾಶ್ ಗಿರಿಯೊಂದಿಗೆ ‘ಮ್ಯಾನ್ ಆಫ್ ದಿ ಮ್ಯಾಚ್” ಪ್ರಶಸ್ತಿ ಪಡೆದಿರುತ್ತಾನೆ.
ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 453 ಸ್ಪರ್ಧಿಗಳು ಆಡಿಷನ್‌ನಲ್ಲಿ ಭಾಗವಹಿಸಿದ್ದರು. ಗಾಯಕರಾದ ಡಾ.ಶಶಿಧರ್ ಕೋಟೆ, ರಮೇಶ್ಚಂದ್ರ,ಜಯಶ್ರೀ ಅರವಿಂದ ತೀರ್ಪುಗಾರಾಗಿದ್ದರು. ಅಶ್ವಿಜ್ ಅತ್ರೇಯ ಗಾನಸಿರಿ ಡಾ.ಕಿರಣ್ ಕುಮಾರ್ ಮತ್ತು ಶ್ರೀ ಲಕ್ಷ್ಮಿ ಪುತ್ತೂರು ಇವರಿಂದ ಸುಗಮಸಂಗೀತ ಸತತ 5 ವರುಷಗಳಿಂದ ಕಲಿಯುತ್ತಿದ್ದಾನೆ.
ಕಾಂಚನ ಈಶ್ವರಭಟ್ ಅವರಲ್ಲಿ ಶಾಸ್ರೀಯ ಕಲಿಯುತಿದ್ದು
ಶಿಬಿರಗಳಲ್ಲಿ ಭಾಗವಹಿಸಿ ಹಾಡುಗಾರರಾದ ಸುಪ್ರೀಯ ರಘನಂದನ್ ಮತ್ತು ರಮೇಶ್ಚಂದ್ರ ಅವರಿಂದ ಹಾಡುಗಳನ್ನು ಕಲಿತಿರುತ್ತಾನೆ.
ಪ್ರಭು ಬುಕ್ ಸೆಂಟರ್‌ನ ರಾಮಚಂದ್ರ ಮತ್ತು ಉಷಾ ದಂಪತಿಗಳ ಪುತ್ರನಾದ ಅಶ್ವಿಜ್ ಸೈಂಟ್ ಜೋಸೆಪ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ.