ಹಾಸನಡ್ಕದಲ್ಲಿ ಸಿಡಿಲು ಬಡಿದು ಸುಟ್ಟು ಕರಕಲಾದ ಬೃಹತ್ ಗಾತ್ರದ ಮರ

0

ಅಮರಮುಡ್ನೂರಿನ ಹಾಸನಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎದುರುಗಡೆ ಇದ್ದ ಬೃಹತ್ ಗಾತ್ರದ ಮರವೊಂದಕ್ಕೆ ಕಳೆದ ಕೆಲ ದಿನಗಳ ಹಿಂದೆ ಸಿಡಿಲು ಬಡಿದು ಮರ ಸಂಪೂರ್ಣ ಸುಟ್ಟು ಹೋಗಿದೆ.

ಕಳೆದ ಹತ್ತು ದಿನಗಳ ಹಿಂದೆ ಬೀಸಿದ ಗಾಳಿ ಮಳೆಯ ಸಂದರ್ಭ ಭಾರಿ ಪ್ರಮಾಣದಲ್ಲಿ ಹೊಡೆದ ಸಿಡಿಲಿನಿಂದ ಮರಕ್ಕೆ ಬೆಂಕಿ ಹತ್ತಿಕೊಂಡು ಮರದ ತುದಿಯಿಂದ ಬುಡದವರೆಗೆ ಪೂರ್ಣ ಪ್ರಮಾಣದಲ್ಲಿ ಸುಟ್ಟು ಕರಕಲಾಗಿದೆ.