ಸೈಂಟ್ ಜೋಸೆಫ್ ಪ್ರಾಥಮಿಕ ಶಾಲೆಯಲ್ಲಿ ನೂತನ ವಿದ್ಯಾರ್ಥಿ ಮಂತ್ರಿ ಮಂಡಲ ರಚನೆ

0


ಸೈಂಟ್ ಜೋಸೆಫ್ ಪ್ರಾಥಮಿಕ ಶಾಲೆ ಇಲ್ಲಿ 2023-24 ನೇ ಸಾಲಿನ ಶಾಲಾ ವಿದ್ಯಾರ್ಥಿ ಸರಕಾರವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸುವ ಮೂಲಕ ರಚನೆ ಮಾಡಲಾಯಿತು. ಮುಖ್ಯಮಂತ್ರಿಯಾಗಿ ೭ನೇ ಬಿ ತರಗತಿಯ ಆಮಿನತ್ ಹೈನ ತಸ್ನೀನ್ ಉಪಮುಖ್ಯ ಮಂತ್ರಿಯಾಗಿ ೭ನೇ ಬಿ ತರಗತಿಯ ಮುಹಮ್ಮದ್ ಹಫೀಝ್ ಕೆ.ವೈ ವಿರೋಧ ಪಕ್ಷದ ನಾಯಕನಾಗಿ ಮಹಮ್ಮದ್ ರಝೀನ್ , ಉಪನಾಯಕಿ ಯುಕ್ತಿ ಡಿ.ಎಸ್., ಸ್ವೀಕರ್ ಶ್ರೇಯಸ್ ಕೆ.ಪಿ , ಗವರ್ನರ್ ಶ್ರೀಮಾ ಎಂ.ಬಿ , ಕಾರ್ಯದರ್ಶಿ ಅನುಜ್ಞಾ ಕೆ.ಯಂ ಆಯ್ಕೆಯಾದರು.


ವಿದ್ಯಾಮಂತ್ರಿಯಾಗಿ ಪವನ ಕೆ ೭ಂ ಉಪವಿದ್ಯಾಮಂತ್ರಿ ಪ್ರೀತನ್ ವಿನ್ಸ್ ಡಿ’ಸೋಜ ೬ಂ ಕ್ರೀಡಾ ಮಂತ್ರಿಯಾಗಿ ವೈಷ್ಣವಿ ಕೆ., ಉಪಕ್ರೀಡಾಮಂತ್ರಿಯಾಗಿ ತ್ರಿಜಲ್ ಕೆ.ಯಂ., ಸಾಂಸ್ಕೃತಿಕ ಮಂತ್ರಿಯಾಗಿ ಅನುಜ್ಞಾ ಎ., ಉಪಸಾಂಸ್ಕೃತಿಕ ಮಂತ್ರಿಯಾಗಿ ಪ್ರಿನ್ಸಿಯಾ ಕ್ರಾಸ್ತ ೬ಂ ವಾರ್ತಾ ಮಂತ್ರಿಯಾಗಿ ಬಾಂಧವಿ ಬಿ.ಯಂ , ಉಪವಾರ್ತಾ ಮಂತ್ರಿಯಾಗಿ ಡೆಲ್ಲಾ ಅಜೇಶ್, ಆರೋಗ್ಯ ಮಂತ್ರಿಯಾಗಿ ಅಕ್ಷಯ್ ಎಂ.ಹೆಚ್, ಉಪ ಆರೋಗ್ಯ ಮಂತ್ರಿಯಾಗಿ ಸಾರಾಅಲೀನ, ಶಿಸ್ತು ಮಂತ್ರಿಯಾಗಿ ಪರ್ಲ್ ಮಹಿಮಾ ಮಾಡ್ತಾ,ಉಪಶಿಸ್ತು ಮಂತ್ರಿಯಾಗಿ ಶಮಂತ್ ಪಿ.ಯಂ., ಆಹಾರ ಮಂತ್ರಿಯಾಗಿ ನೈತಿಕ್ ಜಿ., ಉಪಆಹಾರ ಮಂತ್ರಿಯಾಗಿ ಭುವನ್ .ಬಿ , ವಿರೋಧ ಪಕ್ಷದ ಸದಸ್ಯರುಗಳಾಗಿ ಲಕ್ಷಜಿತ್ ಜಿ.ರೈ, ಅದಿತಿ ಯಂ. ಎಸ್, ಗೌತಮ್ ಸಿ.ಆರ್, ಆದಿತ್ಯ ಪ್ರಭು , ಪುಷ್ಪಕ್ ಎ.ಎಸ್. ಆಯ್ಕೆಯಾದರು.


ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮ ರವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಟವೇಣಿ.ಬಿ ಸಹಶಿಕ್ಷಕರಾದ ಶ್ರೀಮತಿ ಸವಿತ , ಶ್ರೀಮತಿ ಶೋಭ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.