⏭️ ಅಂಗಾರರಾದರೆ ಬರುತ್ತಿದ್ದರು; ಭಾಗೀರಥಿಯವರನ್ನೂ ನಿರೀಕ್ಷೆ ಮಾಡಿದ್ದೆ
⏭️ ನ.ಪಂ.ಸದಸ್ಯ ಎಂ. ವೆಂಕಪ್ಪ ಗೌಡ ಪ್ರಸ್ತಾಪ
ಮಹಿಳೆಯರಿಗೆ ಉಚಿತ ಪ್ರಯಾಣದ ರಾಜ್ಯ ಸರಕಾರದ ಶಕ್ತಿ ಯೋಜನೆ ಚಾಲನೆ ಸಮಾರಂಭಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಗೈರು ಹಾಜರಾಗಿದ್ದರು. ಹಾಗಾಗಿ ತಹಶೀಲ್ದಾರ್ ಜಿ. ಮಂಜುನಾಥ್ ಚಾಲನೆ ನೀಡಿದರು.
ಸಮಾರಂಭದಲ್ಲಿ ಅತಿಥಿಯಾಗಿದ್ದ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡರು ತನ್ನ ಭಾಷಣದಲ್ಲಿ, ” ಇಂದು ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಬೇಕಾಗಿತ್ತು. ಅಂಗಾರರಾಗಿದ್ದರೆ ಆಗಮಿಸುತ್ತಿದ್ದರು. ಮುಂಚೂಣಿಯಲ್ಲಿ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಅವರನ್ನು 30 ವರ್ಷದಿಂದ ನೋಡುತ್ತಿದ್ದೇವೆ. ಇದು ಸರಕಾರಿ ಕಾರ್ಯಕ್ರಮ. ಮಹಿಳಾ ಸಬಲೀಕರಣದ ಕಾರ್ಯಕ್ರಮ. ನಮ್ಮ ಶಾಸಕಿ ಕೂಡಾ ಮಹಿಳೆ. ಭಾಗೀರಥಿಯವರು ಬಂದಿದ್ದರೆ ಅವರಿಗೆ ಹೂವು ಕೊಟ್ಟು ಸ್ವಾಗತಿಸಲು ನಾನೇ ಸಿದ್ಧನಾಗಿದ್ದೆ. ಸರಕಾರದ ಮುಂದಿನ ಗ್ಯಾರಂಟಿ ಚಾಲನೆ ಸಂದರ್ಭದಲ್ಲಾದರೂ ಅವರು ಬಂದು ಸಹಕಾರ ನೀಡಲಿ. ನಾನು ಇಲ್ಲಿ ಬಂದಿರುವುದು , ಮಾತನಾಡಿರುವುದು ಜನಪ್ರತಿನಿಧಿ ನೆಲೆಯಲ್ಲಿ ಎಂದು ಹೇಳಿದರು.