ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೊಸ ಕೋರ್ಸ್ ಆರಂಭಿಸಲು ಎ ಐ ಸಿ ಟಿ ನ್ಯೂ ಡೆಲ್ಲಿಯಿಂದ ಅನುಮೋದನೆ

0


ಪ್ರಸಕ್ತ 2023 24 ನೇ ಸಾಲಿನಲ್ಲಿ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೊಸ ಕೋರ್ಸ್ ಕಂಪ್ಯೂಟರ್ ಇಂಜಿನಿಯರಿಂಗ್ ಅನ್ನು ಪ್ರಾರಂಭಿಸಲು ಹಾಗೂ ಎಂ ಬಿ ಎ ಇದರ ಸೀಟು ಹೆಚ್ಚಳಕ್ಕೆ ಎ ಐ ಸಿ ಟಿ ನ್ಯೂ ಡೆಲ್ಲಿ ಇಂದ ಅನುಮತಿ ದೊರೆತಿದೆ.


ಈಗಾಗಲೇ 2023 24 ಸಾಲಿನ ಇಂಜಿನಿಯರಿಂಗ್ ದಾಖಲಾತಿಗಳು ಪ್ರಾರಂಭವಾಗಿದ್ದು ಇಂಜಿನಿಯರಿಂಗ್ ವಿಭಾಗಗಳಾದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ( ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಂಡ್ ಮಷೀನ್ ಲರ್ನಿಂಗ್,) ಕಂಪ್ಯೂಟರ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್ ವಿಭಾಗಗಳಿಗೆ ದಾಖಲಾತಿ ಪಡೆಯಬಹುದಾಗಿದೆ.


ಗ್ರಾಮೀಣ ಮಟ್ಟದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಆಡಳಿತ ಮಂಡಳಿ ತಿಳಿಸಿದೆ
ಹೊಸ ಕೋರ್ಸು ಸೇರ್ಪಡೆ ಹಾಗೂ ಸೀಟು ಹೆಚ್ಚಳಕ್ಕೆ ಕೆವಿಜಿ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿಯವರಾದ ಡಾ. ರೇಣುಕಾ ಪ್ರಸಾದ್ ಕೆ ವಿ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಜೆ, ಪ್ರಾಂಶುಪಾಲರಾದ ಡಾ. ಸುರೇಶ ವಿ, ಉಪ ಪ್ರಾಂಶುಪಾಲರಾದ ಡಾ. ಶ್ರೀಧರ ಕೆ ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು