ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮಂತ್ರಿ ಮಂಡಲ ರಚನೆಯ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಕೆ. ಎಸ್. ರವರು ಮಂತ್ರಿ ಮಂಡಲದ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನಡೆಸಿಕೊಟ್ಟರು.ಶಾಲಾ ನಾಯಕನಾಗಿ ಶ್ರೀಜಿತ್ ಡಿ. ಟಿ. (6ನೇ), ಶಾಲಾ ಉಪನಾಯಕಿಯಾಗಿ ಮಿಥಾಲಿ ಕೊಯ್ನಾಡು(5ನೇ ), ಸಭಾಪತಿಯಾಗಿ ಶ್ರೇಯಾಂಕ್ ಕೋಲ್ಚಾರು(5ನೇ). ವಿದ್ಯಾಮಂತ್ರಿಯಾಗಿ ಶರಣ್ಯ(6ನೇ), ಶಿಸ್ತುಮಂತ್ರಿಯಾಗಿ ಲೇಖನಿ (6ನೇ), ಆರೋಗ್ಯ ಮಂತ್ರಿಯಾಗಿ ಸಾನಿಕ ರಾವ್ (6ನೇ ),ಸಾಂಸ್ಕೃತಿಕಾ ಮಂತ್ರಿಯಾಗಿ ಆತ್ಮಿಕಾ ಜೆ. (6ನೇ), ಸಾರಿಗೆ ಮಂತ್ರಿಯಾಗಿ ಮುಹಮ್ಮದ್ ಅನಸ್(6ನೇ), ಕ್ರೀಡಾ ಮಂತ್ರಿಯಾಗಿ ಚಿನ್ಮಯಿ ಕೆ. ಕೆ. (5ನೇ), ನೀರಾವರಿ ಮಂತ್ರಿಯಾಗಿ ಈಶಾನ ಕೆ. (5ನೇ)ರವರು ಆಯ್ಕೆ ಆದರು
.ಕಲಾ ಶಿಕ್ಷಕ ಪದ್ಮನಾಭ ಕೊಯ್ನಾಡು ರವರ ಆರಂಭ ಗೀತೆಯೊಂದಿಗೆ ಕಾರ್ಯಕ್ರಮ ಮೊದಲ್ಗೊಂಡಿತು. ಸಹ ಶಿಕ್ಷಕಿ ಶ್ರೀಮತಿ ನಳಿನಿ ಡಿ. ರವರು ಸ್ವಾಗತಿಸಿದರು.
ಶಾಲಾ ನಾಯಕ ಶ್ರೀಜಿತ್ ಡಿ. ಟಿ. ಮತ್ತು ಉಪನಾಯಕಿ ಮಿಥಾಲಿ ಕೊಯ್ನಾಡು ರವರು ಅಭಿಪ್ರಾಯ ಹಂಚಿಕೊಂಡರು. ಸಹ ಶಿಕ್ಷಕಿ ಶ್ರೀಮತಿ ಸರೋಜ ಎಂ. ಟಿ.ರವರು ಧನ್ಯವಾದ ಸಮರ್ಪಣೆ ಮಾಡಿದರು.ಕಂಪ್ಯೂಟರ್ ಶಿಕ್ಷಕಿ ಶ್ರೀಮತಿ ಶೋಭಾ ಎ. ಬಿ. ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಗೀತಾ ಎನ್. ರವರು ಕಾರ್ಯಕ್ರಮದ ವ್ಯವಸ್ಥೆಗೆ ಸಹಕರಿಸಿದರು.