ರೋಟರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ರಚನೆ

0

ಶಾಲಾ ನಾಯಕಿಯಾಗಿ ಭಾನವಿ ಕೈೂಂಗಾಜೆ, ಉಪನಾಯಕನಾಗಿ ಸಮೃದ್ದ್ ಕೆ.ಎಸ್.

ಜೂನ್ 19 ರಂದು ರೋಟರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ರಚನೆ ನಡೆಯಿತು. ಸಂಸ್ಥೆಯ ಸಂಚಾಲಕರಾದ ರೊ.ಗಿರಿಜಾ ಶಂಕರ್ ತುದಿಯಡ್ಕ ದೀಪ ಬೆಳಗಿಸಿ, ಕಾರ್ಯ ಕ್ರಮವನ್ನು ಉದ್ಘಾಟಿಸಿ ,ಶುಭಹಾರೈಸಿದರು . ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಪ್ರಮಾಣ ವಚನ ಭೋದಿಸಿದರು.

ಶಾಲಾ ನಾಯಕಿಯಾಗಿ – ಭಾನವಿ ಕೈೂಂಗಾಜೆ ಶಾಲಾ ಉಪನಾಯಕನಾಗಿ ಸಮೃದ್ದ್ , ಸಭಾಧ್ಯಕ್ಷರಾಗಿ – ಫಾತಿಮತ್ ಫಾಯಿಝ , ಶಿಕ್ಷಣ ಮಂತ್ರಿಯಾಗಿ – ಆಕಾಂಕ್ಷ ಕೆ.ಯು , ಆಹಾರ ಮಂತ್ರಿಯಾಗಿ- ಶ್ರವಣ್ ಯು.ಎ , ಸಾಂಸ್ಕ್ರತಿಕ ಮಂತ್ರಿಯಾಗಿ – ಸಿಂಚನಾ ಎನ್.ಪಿ, ಸಾಹಿತ್ಯ ಮಂತ್ರಿಯಾಗಿ- ರಚನ ಪಿ.ಎಸ್ , ಕ್ರೀಡಾ ಮಂತ್ರಿಯಾಗಿ- ಮೊಹಮ್ಮದ್ ಅನ್ಷದ್ , ಶಿಸ್ತುಪಾಲನಾ ಮಂತ್ರಿಯಾಗಿ – ಪ್ರಸನ್ನ ಪಿ.ಪಿ, ಆರೋಗ್ಯ ಮಂತ್ರಿಯಾಗಿ – ಆಶಿತಾ
ಕೆ.ಜೆ , ನೀರಾವರಿ ಮಂತ್ರಿಯಾಗಿ – ಶೈನ್ , ಸಾರಿಗೆ ಮಂತ್ರಿಯಾಗಿ – ಆಯಿಶತುಲ್ ಮುಫಿದಾ ,
ಸ್ವಚ್ಛತಾ ಮಂತ್ರಿಯಾಗಿ – ಶನೋಬ್ ರೆಹಮನ್ ಪ್ರಮಾಣ ವಚನ ಸ್ವೀಕರಿಸಿದರು.


ಚುನಾವಣಾಧಕಾರಿಯಾಗಿ ಕಲಾ ಶಿಕ್ಷಕರಾದ ಶ್ರೀಹರಿ ಪೈಂದೋಡಿ ಕರ್ತವ್ಯ ನಿರ್ವಹಿಸಿ , ನಾಯಕರ ಕರ್ತವ್ಯಗಳನ್ನು ತಿಳಿಸಿದರು.

ಶಿಕ್ಷಕಿ ಶ್ರೀಮತಿ ಜಯಶ್ರೀ ಸ್ವಾಗತಿಸಿ, ಶ್ರೀಮತಿ ಸಂಜೀವಿ ಪಿ. ಆರ್. ವಂದಿಸಿದರು. ಕು. ರಮ್ಯ ಕಾರ್ಯಕ್ರಮ ನಿರೂಪಿಸಿದರು.