ದಡಾರ ರುಬೆಲ್ಲಾ ಖಾಯಿಲೆ ಹಾಗೂ ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಎನ್ನೆoಸಿಯ ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕುಲದೀಪ್ ಉಪನ್ಯಾಸ ನೀಡುತ್ತಾ ಅತೀ ಆಸೆಗೆ ಜನರು ಬಲಿ ಬಿದ್ದು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ.ಅದರ ವಿರುದ್ಧ ಜಾಗೃತಿ ಅಗತ್ಯ. ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ ವಯೋ ಸಹಜ ಕುತೂಹಲಕ್ಕೆ ಮನಸ್ಸು ಸುಳಿಯಬಾರದು. ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಿ ಎಂದರು.
ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ ಎಂ, ಹರೀಶ ಸಿ ಉಪಸ್ಥಿತರಿದ್ದರು.ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ ಸ್ವಾಗತಿಸಿ,ವಿದ್ಯಾರ್ಥಿ ಕ್ಷೇಮಾಧಿಕಾರಿ ಹರೀಶ ಸಿ ವಂದಿಸಿದರು.ಉಪನ್ಯಾಸಕಿ ಗೀತಾ ಎನ್ ನಿರೂಪಿಸಿದರು