ಜೂನ್ 21 ರಂದು ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಹರ್ ಘರ್ ಅಂಗನ್ ಘೋಷ ವಾಕ್ಯದೊಂದಿಗೆ ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಎನ್ ವೆಂಕಟ್ರಮಣ ಭಟ್ ವಹಿಸಿದ್ದರು. ಯೋಗಾಸನವನ್ನು ಪ್ರತಿದಿನ ಮಾಡುವುದರಿಂದ ಆರೋಗ್ಯದಿಂದ ಇರಬಹುದು ಎಂದು ಹೇಳಿದರು. ಯಶೋಧರ ಎನ್ ಮುಖ್ಯಶಿಕ್ಷಕರು ಸ್ವಾಗತಿಸಿದರು. ಯೋಗ ಶಿಕ್ಷಕ ಉದಯಕುಮಾರ್ ರೈ ಎಸ್ ಮತ್ತು ಅರವಿಂದ ಕಾಯಾರ ಯೋಗಾಭ್ಯಾಸವನ್ನು ಮಾಡಿಸಿದರು.
ಯೋಗ ದಿನಾಚರಣೆ ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕ ಹರಿಪ್ರಸಾದ್ ರೈ ಜಿ ನಿರೂಪಿಸಿದರು. ವೆಂಕಟೇಶ್ ಕುಮಾರ್ ವಂದಿಸಿದರು. ಎಲ್ಲಾ ಸಿಬ್ಬಂದಿಗಳು ವಿದ್ಯಾರ್ಥಿಗಳು ಭಾಗವಹಿಸಿದರು.